ತಿರುವನಂತಪುರಂ: ವಿದೇಶ ಪ್ರವಾಸ ಮುಗಿಸಿ ಮರಳಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಜ್ವರ ಕಾಣಿಸಿಕೊಂಡಿದೆ.
ಸದ್ಯ ವೈದ್ಯರ ಆದೇಶದಂತೆ ಮುಖ್ಯಮಂತ್ರಿ ವಿಶ್ರಾಂತಿಯಲ್ಲಿದ್ದಾರೆ. ಜ್ವರದ ಕಾರಣ ಮುಖ್ಯಮಂತ್ರಿಗಳು ತಾವು ಭಾಗವಹಿಸಬೇಕಿದ್ದ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ಮುಂದೂಡಿರುವÀರು. ಜೂನ್ 27 ರವರೆಗಿನ ಅಧಿಕೃತ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಇದನ್ನು ಮುಖ್ಯಮಂತ್ರಿಗಳ ಕಚೇರಿ ಬಿಡುಗಡೆ ಮಾಡಿದೆ.
ಜ್ವರದ ಕಾರಣ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಆನ್‍ಲೈನ್‍ನಲ್ಲಿ ಭಾಗವಹಿಸಿದ್ದರು. ಪಿಣರಾಯಿ ವಿಜಯನ್ 12 ದಿನಗಳ ವಿದೇಶ ಪ್ರವಾಸದ ನಂತರ ತಿರುವನಂತಪುರಕ್ಕೆ ಮರಳಿದ್ದರು.
ಈ ನಡುವೆ ರಾಜ್ಯದಲ್ಲಿ ಜ್ವರದ ಅಬ್ಬರ ತೀವ್ರಗೊಳ್ಳುತ್ತಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆದಿದ್ದಾರೆ. ರಾಜ್ಯದಲ್ಲಿ ಡೆಂಗ್ಯೂ ಜ್ವರ, ಇಲಿ ಜ್ವರ, ವೈರಲ್ ಜ್ವರ, ಟೈಫಾಯಿಡ್ ಮತ್ತು ಎಚ್1ಎನ್1 ಹರಡಿದೆ. ಅಲ್ಲದೆ ಕಳೆದ 48 ಗಂಟೆಗಳಲ್ಲಿ ಐವರು ಸಾವನ್ನಪ್ಪಿದ್ದಾರೆ. ಇಲಿ ಜ್ವರದಿಂದ ಸಾವು ವರದಿಯಾಗಿದೆ.