ಹಪ್ಪಳ ಎಲ್ಲರಿಗೂ ಪ್ರಿಯವಾದ ಅನಿವಾರ್ಯ ಖಾದ್ಯ. ಎμÉ್ಟೂೀ ಮಂದಿಗೆ ಹಪ್ಪಳ ಒಂದಷ್ಟಿದ್ದರೆ ಸಾಕು.ಊಟಕ್ಕೆ ಬೇರೇನೂ ಬೇಕಾಗುವುದಿಲ್ಲ.
ರಾತ್ರಿಯ ಊಟಕ್ಕೆ ಸಾರಿನ ಜೊತೆಗೆ ಹಪ್ಪಳ ಪುಡಿಗೈದು ಮಾಡುವ ಊಟದಿಂದ ಸಿಗುವ ಸಂತೃಪ್ತಿಯೇ ಬೇರೆ. ಕರಾವಳಿಯಾದ್ಯಂತ ಹಪ್ಪಳ ಎಲ್ಲರ ಅಚ್ಚುಮೆಚ್ಚಿನ ಅಡುಗೆ ಮನೆಯ ಅತಿ ಉಪಯುಕ್ತ ವಸ್ತು. ಅದರಲ್ಲೂ ಕೇರಳೀಯರು ಊಟದ ಮಾತ್ರವಲ್ಲ, ದೋಸೆ, ಇಡ್ಲಿ, ಪುಟ್ಟಿನ ಜೊತೆಯೂ ತಿನ್ನುತ್ತಾರೆ. ಬಹುತೇಕರು ಹಪ್ಪಳ ಅಂಗಡಿಯಿಂದ ರೆಡಿಮೇಡ್ ಇರುವುದನ್ನೇ ಈಗೀಗ ಖರೀದಿಸುವುದು ಸಾಮಾನ್ಯ. ಮನೆಯಲ್ಲಿ ಒಳ್ಳೆ ಹಪ್ಪಳ ಮಾಡಬೇಕೆಂದು ಆಗಾಗ ಯೋಚಿಸುತ್ತಿರುತ್ತೇವೆ. ಆದರೆ, ಹಲವರಿಗೆ ಹೇಗೆ ಮಾಡಬೇಕೆಂದು ತಿಳಿದಿಲ್ಲ. ಹಾಗಿದ್ದರೆ ಹಪ್ಪಳ ಮಾಡುವುದು ಹೇಗೆಂದು ನೋಡೋಣ.
ಬೇಕಾಗುವ ಸಾಮಾಗ್ರಿಗಳು(ಉದ್ದಿನ ಹಪ್ಪಳ)
ಉದ್ದಿನ ಬೇಳೆ - 1 ಕೆಜಿ
ಮೆಂತ್ಯ - 1 ಟೀಸ್ಪೂನ್
ಸೋಡಾ ಪುಡಿ(ಸೋಡಿಯಂ ಬೈ ಕಾರ್ಬೋನೇಟ್)- 35 ಗ್ರಾಂ
ಉಪ್ಪು - ಅಗತ್ಯವಿರುವಷ್ಟು
ತಯಾರಿ ಹೇಗೆ
ಮೊದಲು, ಉದ್ದಿನ ಬೇಳೆಗಳನ್ನು ನುಣ್ಣಗೆ ರುಬ್ಬಿರಬೇಕು. ಅದಕ್ಕೆ ಬೇಕಾದಷ್ಟು ಉಪ್ಪು, ಬ್ರೆಡ್ ತುಂಡುಗಳು ಮತ್ತು ಸೋಡಾ ಪುಡಿ ಸೇರಿಸಿ. ಅದಕ್ಕೆ ನೀರು ಸೇರಿಸಿ ಕಲಸಿ. ಚೆನ್ನಾಗಿ ಬೆರೆಸಿಕೊಳ್ಳಿ. ನಂತರ ಅದನ್ನು ಸಣ್ಣ ಉಂಡೆಗಳಾಗಿ ಸುತ್ತಿಕೊಳ್ಳಿ. ಅದನ್ನು 7 ಸೆಂ.ಮೀ ವ್ಯಾಸಕ್ಕೆ ಹರಡಬೇಕು.(ಮರದ ಹಲಗೆ ಅಥವಾ ಮಣೆ ಬಳಸಿ ಒತ್ತುವುದು). ಹರಡಿದ ನಂತರ, ಬಿಸಿಲಿನಲ್ಲಿ ಒಣಗಲು ಬಿಡಿ. ಒಳ್ಳೆಯ ಉದ್ದಿನ ಹಪ್ಪಳ ಸಿದ್ಧವಾಗುತ್ತದೆ. ಹಪ್ಪಳವನ್ನು ಯಾವಾಗಲೂ ಒಣ ಸ್ಥಳದಲ್ಲಿ ಶೇಖರಿಸಿಡಬೇಕು. ಹಾಗಿದ್ದಲ್ಲಿ ಒಂದು ತಿಂಗಳಾದರೂ ಹಾಗೆಯೇ ಇರುತ್ತದೆ.