HEALTH TIPS

ಬಾಯಾರು ನಿವಾಸಿ ಅಡ್ಯನಡ್ಕ ಪಿಯು ಕಾಲೇಜಿನ ವಿದ್ಯಾರ್ಥಿ ಬಳ್ಳೂರಿನಲ್ಲಿ ಬೈಕ್ ನಿಲ್ಲಿಸಿ ನಾಪತ್ತೆ


             ಉಪ್ಪಳ:  ಬಾಯಾರು ಅನಂತಗಿರಿಯ ಗೋಪಾಲ ನಾಯಕ್ ಎಂಬವರ ಪುತ್ರ ಅಡ್ಯನಡ್ಕ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಅಂಕಿತ್ ನಾಯಕ್ ರವಿವಾರ ಸಂಜೆಯಿಂದ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. 
                ಸಂಜೆ ನೆರೆ ಮನೆಗೆ ಹೋಗಿ ಬರುತ್ತೇನೆಂದು ತಂದೆಯವರ KL14 T 9764 ಹೊಂಡಾ ಅಕ್ವಿವಾ ಗಾಡಿಯನ್ನು ತೆಗೆದುಕೊಂಡು ಹೋದವ ಬಳಿಕ ಬಾರದಿರುವುದನ್ನು  ಗಮನಿಸಿ ಮನೆಯವರು ಸಂಜೆ 6 ಗಂಟೆಯಿಂದ  ಹುಡುಕಾಟ ನಡೆಸಿದ್ದರು‌. ಈ ನಡುವೆ ಬೈಕನ್ನು ಬಳ್ಳೂರು ಬಸ್ಟೆಂಡ್ ಪರಿಸರದಲ್ಲಿ ಉಪೇಕ್ಷಿಸಿ ಅಲ್ಲಿಂದ ಖಾಸಗೀ ಬಸ್ಸಿನಲ್ಲಿ ಕುದ್ದುಪದವು ಕಡೆಗೆ ತೆರಳಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಮಂಜೇಶ್ವರ ಪೋಲಿಸ್ ಠಾಣೆಗೆ ದೂರು ನೀಡಲಾಗಿದ್ದು ವಿದ್ಯಾರ್ಥಿ ವಿಟ್ಲ ಭಾಗಕ್ಕೆ ತೆರಳಿರುವ ಹಿನ್ನಲೆಯಲ್ಲಿ ಕರ್ನಾಟಕ ಪೋಲಿಸರಿಗೂ ತನಿಖೆಗೆ ಮನವಿ ಮಾಡಲಾಗಿದೆ. ಈ ನಡುವೆ ಯಾರದರೂ ಕಂಡವರಿದ್ದರೆ ತಕ್ಷಣ 7829764213,8086247293 ನಂಬ್ರಕ್ಕೆ ಕರೆ ಮಾಡಿ ಮಾಹಿತಿ ನೀಡಲು ಮನವಿ ಮಾಡಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries