ಕುಂಬಳೆ: ಸೂರಂಬೈಲು ಶಾಲೆಯಲ್ಲಿ ಪ್ರವೇಶೋತ್ಸವ ಜರಗಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ದಯಾನಂದ ಪೆರ್ಣೆ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತಿ ಸದಸ್ಯೆ ಚಂದ್ರಾವತಿ ಉದ್ಘಾಟಿಸಿದರು. ಗ್ರಾಮ ಪಂಚಾಯತಿ ಸದಸ್ಯ ಅನಿತಾಶ್ರೀ ಕಲಿಕೋಪಕರಣ ಕಿಟ್ ವಿತರಿಸಿದರು. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನ್ಯಾಯವಾದಿ. ಥೋಮಸ್ ಡಿಸೋಜ, ಎಸ್.ಎಂ.ಸಿ ಅಧ್ಯಕ್ಷ ಶಿವರಾಮ ಭಟ್, ಮಾತೃ ಸಮಿತಿ ಅಧ್ಯಕ್ಷೆ ಸುಜಾತ, ರಾಜಿ ರಾಜೇಶ್, ಸುಧಾಕರ, ಶಿವಾನಂದ ಪೆರ್ಣೆ ಮಾತನಾಡಿದರು. ಸಂತೋμï ಆಟ್ರ್ಸ್ ಏಂಡ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ಕೆಸ್ವಾ ಸಂಘಟನೆ ವತಿಯಿಂದ ಒಂದನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕಲಿಕೋಪಕರಣ ಕಿಟ್ ವಿತರಿಸಲಾಯಿತು. ಮೆರವಣಿಗೆಯೊಂದಿಗೆ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು. ರಾಧಾಕೃಷ್ಣ ಅವರು ಸಿಹಿತಿಂಡಿ ಹಂಚಿದರು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಚಂದ್ರಶೇಖರ.ಡಿ ಸ್ವಾಗತಿಸಿ, ನೌಕರ ಸಂಘದ ಕಾರ್ಯದರ್ಶಿ ಕಿರಣ್ ಕೆ ವಂದಿಸಿದರು. ಇಸ್ಮಾಯಿಲ್ ಕಾರ್ಯಕ್ರಮ ನಿರ್ವಹಿಸಿದರು.