ತಿರುವನಂತಪುರ: ಬೌದ್ಧಿಕ ಸ್ವಾತಂತ್ರ್ಯ ಏನನ್ನೂ ಹೇಳಲು ಇರುವ ಪರವಾನಗಿ ಅಲ್ಲ. ವಿದ್ಯಾರ್ಥಿಗಳು ಮತ್ತು ಯುವಕರನ್ನು ದಾರಿ ತಪ್ಪಿಸುವ ಸಂಗತಿಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಹೇಳಿರುವರು.
ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕೊಳಕು ಬರುತ್ತಿದೆ. ಮಕ್ಕಳ ಮಾನಸಿಕ ಸ್ಥಿತಿಯನ್ನು ಒಡೆಯಲು ಯಾರಿಗೂ ಅವಕಾಶ ನೀಡುವುದಿಲ್ಲ. ಸಾಮಾಜಿಕ ಮಾಧ್ಯಮಕ್ಕೆ ಬಂದಾಗ ಮಕ್ಕಳಿಗೆ ಏನನ್ನು ವೀಕ್ಷಿಸಬೇಕೆಂಬ ಅರಿವುಗಳಿರುವುದಿಲ್ಲ. ಮಕ್ಕಳಿಗೆ ನೆರವಾಗಲು ಶಿಕ್ಷಣ ಇಲಾಖೆ ಯೋಜನೆ ಸಿದ್ಧಪಡಿಸಲಿದೆ. ಬೆಳೆಯುತ್ತಿರುವ ಪೀಳಿಗೆಯನ್ನು ನಾಶ ಮಾಡಲು ಬಿಡುವುದಿಲ್ಲ ಎಂದು ಸಚಿವರು ಹೇಳಿದರು.
ಕೊಚ್ಚಿಯಿಂದ ವಲಂಚೆರಿ ಪೊಲೀಸರು ಬಂಧಿಸಿರುವ ಯೂಟ್ಯೂಬರ್ 'ಟೊಪ್ಪಿ' ಬಿಡುಗಡೆಗೊಂಡಿದ್ದಾನೆ. ಈತನನ್ನು ಕಣ್ಣೂರು ಕಣ್ಣಪುರಂ ಪೋಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ವಲಾಂಚೇರಿ ತಲುಪಿದ ಬಳಿಕ ಬಂಧನವನ್ನು ದಾಖಲಿಸಿ ಜಾಮೀನು ಮಂಜೂರು ಮಾಡಲಾಗಿತ್ತು.