ಮಂಜೇಶ್ವರ: ಮಕ್ಕಳಲ್ಲಿ ಪುಸ್ತಕ ಓದುವಿಕೆಯ ಆಸಕ್ತಿಯನ್ನು ಮೂಡಿಸಲು ವಿವಿಧ ಚಟುವಟಿಕೆಗಳನ್ನು ವಾಚನ ವಾರಾಚರಣೆಯೆಂಬ ಕಾರ್ಯಕ್ರಮದಲ್ಲಿ ಅಳವಡಿಸಿ ಪುಸ್ತಕ ಓದಿನ ಮಹತ್ವದ ಅರಿವನ್ನು ಮೂಡಿಸಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನಲ್ಲಿ ವಾಚನ ವಾರಾಚರಣೆ ನಡೆಸಲಾಯಿತು. ಇದರ ಸಮಾರೋಪ ಸಮಾರಂಭ ಹಾಗೂ ಮಕ್ಕಳ ಬಾಲಸಭೆ ಉದ್ಘಾಟನೆ ನಡೆಯಿತು.
ಕಾರ್ಯಕ್ರಮವನ್ನು ಹವ್ಯಾಸಿ ಬರಹಗಾರ, ಮಂಜೇಶ್ವರ ಎಸ್. ಎ. ಟಿ. ಪ್ರೌಢ ಶಾಲೆಯ ಶಿಕ್ಷಕ ಜಯಪ್ರಕಾಶ್ ಶೆಟ್ಟಿ ಅಂಗಡಿದಾರ್ ಉದ್ಘಾಟಿಸಿದರು. ಶಾಲಾ ವ್ಯವಸ್ಥಾಪಕ ಸಮಿತಿ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಎಲಿಯಾಣ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯ ಜನಾರ್ಧನ ಪೂಜಾರಿ ಕುಳೂರು ಮುಖ್ಯ ಅತಿಥಿಗಳಾಗಿದ್ದರು. ಮಂಜೇಶ್ವರ ಬಿ. ಆರ್. ಸಿಯ ಸಿ. ಆರ್. ಸಿ ಸಂಯೋಜಕಿ ಮೀನಾಕ್ಷಿ ಬೊಡ್ಡೋಡಿ, ಶಾಲಾ ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ, ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುಚರಿತ ಚಿನಾಲ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಚೈತ್ರ ಕಲ್ಕಾರ್ ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸೌಮ್ಯ ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ಶಾಲಾ ಮಕ್ಕಳಿಂದ ರಚಿತವಾದ 'ಮಿನುಗು' ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಜೊತೆಗೆ ವಾಚನ ವಾರಾಚರಣೆಯ ಅಂಗವಾಗಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ಮಕ್ಕಳ ಓದುವಿಕೆ ಹಾಗೂ ಬರವಣಿಗೆಯನ್ನು ಪ್ರೋತ್ಸಾಹಿಸಲು 'ಕತೋತ್ಸವ' ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಾಲಾ ಶಿಕ್ಷಕಿ ಅಶ್ವಿನಿ ಎಂ ಸ್ವಾಗತಿಸಿ, ಶಿಕ್ಷಕಿ ಶ್ವೇತ ಇ ವಂದಿಸಿದರು. ಶಿಕ್ಷಕಿ ನಯನ ಎಂ ಕಾರ್ಯಕ್ರಮ ನಿರೂಪಿಸಿದರು.