ಬದಿಯಡ್ಕ: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಮಾನ್ಯ ವಲಯ ಸಮಿತಿ ರೂಪೀಕರಣ ಸಭೆ ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಸಭಾಂಗಣದಲ್ಲಿ ಜರಗಿತು. ಶ್ರೀ ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಚಾತುರ್ಮಾಸ್ಯ ಮಹೋತ್ಸವದ ಬಗ್ಗೆ ಸಭೆಗೆ ಮಾಹಿತಿಯನ್ನು ನೀಡಿದರು. ಚಾತುರ್ಮಾಸ್ಯ ಸಮಿತಿ ಸಂಚಾಲಕÀ ವೇಣುಗೋಪಾಲ, ನಿವೃತ್ತ ಮುಖ್ಯೋಪಾಧ್ಯಾಯ ವೆಂಕಪ್ಪ ಶೆಟ್ಟಿ ಕಾರ್ಮಾರು, ಮಾನ್ಯ ಮಂದಿರದ ಅಧ್ಯಕ್ಷÀ ರಾಮ ಕಾರ್ಮಾರು, ಬದಿಯಡ್ಕ ಪಂಚಾಯತಿ ಜನಪ್ರತಿನಿಧಿ ಶ್ಯಾಮ ಪ್ರಸಾದ್ ಮಾನ್ಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾನ್ಯ ವಲಯ ಸಮಿತಿ ರೂಪಿಕರಿಸಲಾಯಿತು.
ಅಧ್ಯಕ್ಷರಾಗಿ ವಿಜಯ ಕುಮಾರ್ ಮಾನ್ಯ, ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ, ಕೋಶಾಧಿಕಾರಿಗಳಾಗಿ ಸಂತೋμï ಕುಮಾರ್ ಎಸ್ ಮಾನ್ಯ ಇವರನ್ನು ಆಯ್ಕೆ ಮಾಡಲಾಯಿತು. ಸುಂದರ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿ, ವಿಜಯ್ ಕುಮಾರ್ ಮಾನ್ಯ ವಂದಿಸಿದರು.