ಕಾಸರಗೋಡು : ಕೇಂದ್ರದ ಮಾಜಿ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಜೂ. 20ಮತ್ತು 21ರಂದು ರಂದು ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. 20ರಂದು ಸಂಜೆ 7ಕ್ಕೆ ಕಾಸರಗೋಡು ಸಿಟಿ ಟವರ್ ಸಭಾಂಗಣದಲ್ಲಿ ನಡೆಯುವ ವ್ಯಾಪಾರಿ ಸಂಗಮದಲ್ಲಿ ಪಾಲ್ಗೊಳ್ಳುವರು.
21ರಂದು ಬೆಳಗ್ಗೆ 6.30ಕ್ಕೆ ಪಕ್ಷದ ವತಿಯಿಂದ ಕಾಸರಗೋಡಿನಲ್ಲಿ ಆಯೋಜಿಸಿರುವ ಯೋಗ ಕಾರ್ಯಕ್ರಮದಲ್ಲಿ ಪಲ್ಗೊಳ್ಳುವರು. 8.30ಕ್ಕೆ ಪರವನಡ್ಕದ ನವೋದಯ ಕ್ಲಬ್‍ನಲ್ಲಿ ಯುವಜನತೆಯೊಂದಿಗೆ ಸಂವಾದ ನಡೆಸುವರು. ಮಧ್ಯಾಹ್ನ 12.15ಕ್ಕೆ ನೀಲೇಶ್ವರ ಪಳ್ಳಿಕೆರೆ ರೈಲ್ವೇ ಮೇಲ್ಸೇತುವೆಗೆ ಭೇಟಿ, ಮಧ್ಯಾಹ್ನ 1.30 ಕ್ಕೆ ಪಯ್ಯನ್ನೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪದ್ಮಶ್ರೀ ಅಪ್ಪುಕುಟ್ಟನ್ ಪೊದುವಾಳ್ ಅವರ ಮನೆಗೆ ಭೇಟಿ ಹಾಗೂ 1.30ಕ್ಕೆ ಪಯ್ಯನ್ನೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಪರಕಟಣೆ ತಿಳಿಸಿದೆ.