ಸಮರಸ ಚಿತ್ರಸುದ್ದಿ: ಕಾಸರಗೋಡು: ಚಿನ್ಮಯ ಮಿಷನ್ ಕೇರಳ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ಸಪ್ತತಿ ಆಚರಣೆ ಅಂಗವಾಗಿ ಕಾಸರಗೋಡು ಚಿನ್ಮಯ ಮಿಷನ್ ಹಮ್ಮಿಕೊಂಡಿರುವ ವಿವಿಧ ಸಮಾಜಮುಖಿ ಯೋಜನೆಗಳನ್ವಯ ಬಡಜನತೆಗೆ ನಿರ್ಮಿಸಿಕೊಡುತ್ತಿರುವ ಏಳನೇ ಮನೆಯ ಕೀಲಿಕೈಯನ್ನು ಸ್ವಾಮಿ ವಿವಿಕ್ತಾನಂದ ಸರಸ್ವತೀ ಫಲಾನುಭವಿಗೆ ಹಸ್ತಾಂತರಿಸಿದರು. ಸ್ವಾಮಿ ಚಿದಾನಂದ ಪುರಿ ಉಪಸ್ಥಿತರಿದ್ದರು.