HEALTH TIPS

ಪ್ರಯಾಣಿಕರಲ್ಲಿ ಹೆಚ್ಚುತ್ತಿದೆ ಅಶಿಸ್ತಿನ ವರ್ತನೆ: ಐಎಟಿಎ

             ನವದೆಹಲಿ: ವಿಮಾನ ಪ್ರಯಾಣಿಕರಲ್ಲಿ ಅಶಿಸ್ತಿನ ವರ್ತನೆ ಹೆಚ್ಚುತ್ತಿದೆ ಎಂದು  ಅಂತರಾಷ್ಟ್ರೀಯ ವಿಮಾನಯಾನ ಸಮೂಹ ಐಎಟಿಎ ಹೇಳಿದೆ. 

                 ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಪ್ರತಿ 568 ವಿಮಾನಗಳ ಪೈಕಿ ಒಂದರಲ್ಲಿ ಅಶಿಸ್ತಿನ ಘಟನೆ ವರದಿಯಾಗುತ್ತಿದೆ. 2021 ರಲ್ಲಿ ಇದರ ಅನುಪಾತ ಪ್ರತಿ 835 ವಿಮಾನಗಳ ಪೈಕಿ ಒಂದರಲ್ಲಿ ವರದಿಯಾಗುತ್ತಿತ್ತು ಎಂದು ಐಎಟಿಎ ಮಾಹಿತಿ ನೀಡಿದೆ. 

                ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿದ್ದು, ಭಾರತವೂ ಇದಕ್ಕೆ ಹೊರತಾಗಿಲ್ಲ ಎನ್ನುತ್ತಿದೆ ಐಎಟಿಎ ಬಿಡುಗಡೆ ಮಾಡಿರುವ ವಿಶ್ಲೇಷಣೆಯ ವರದಿ. 

               ಇಂತಹ ಅಶಿಸ್ತಿನ ನಡವಳಿಕೆಗಳ ಪ್ರಕರಣಗಳನ್ನು ಕಡಿಮೆ ಮಾಡುವುದಕ್ಕೆ, ಮಾಂಟ್ರಿಯಲ್ ಪ್ರೋಟೋಕಾಲ್ 2014 (MP14) ಅಡಿಯಲ್ಲಿ ಪ್ರಯಾಣಿಕರನ್ನು ವಿಚಾರಣೆಗೆ ಒಳಪಡಿಸಲು ಹೆಚ್ಚಿನ ರಾಷ್ಟ್ರಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಇಂಟರ್ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (IATA) ಒತ್ತಾಯಿಸಿದೆ.

               ಮೌಖಿಕ ನಿಂದನೆ ಮತ್ತು ಮಾದಕತೆ ಹಾಗೂ ನಿಯಮಗಳ ಉಲ್ಲಂಘನೆಗಳು 2022 ರಲ್ಲಿ ವರದಿಯಾದ ಅತಿ ಹೆಚ್ಚು ಅಶಿಸ್ತಿನ ಘಟನೆಗಳಾಗಿವೆ ಎಂದು ಐಎಟಿಎ ಮಾಹಿತಿ ನೀಡಿದೆ.

               "ದೈಹಿಕ ಹಲ್ಲೆಯಂತಹ ಘಟನೆಗಳು ಬಹಳ ಅಪರೂಪವಾಗಿ ವರದಿಯಾಗಿದ್ದು, ಆದರೆ ಇಂತಹ ಪ್ರಕರಣಗಳೂ 2021 ಕ್ಕೆ ಹೋಲಿಕೆ ಮಾಡಿದರೆ, 61 ಪ್ರತಿಶತದಷ್ಟು ಹೆಚ್ಚಳವನ್ನು ಕಂಡಿವೆ, ಇದು ಪ್ರತಿ 17,200 ವಿಮಾನಗಳ ಪೈಕಿ ಒಂದು ವಿಮಾನದಲ್ಲಿ  ಸಂಭವಿಸಿದೆ" ಎಂದು IATA ಪ್ರಕಟಣೆಯಲ್ಲಿ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries