ಕೊಚ್ಚಿ: ಮಹಿಳಾ ಪ್ರವಾಸಿಗರೊಬ್ಬರು ಕಳೆದುಕೊಂಡಿದ್ದ ದುಬಾರಿ ಐಫೋನ್ ಅನ್ನು ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚುವ ಮೂಲಕ ಕೇರಳದ ಪೊಲೀಸರು ತಮ್ಮ ವೃತ್ತಿಪರತೆ ಮೆರೆದಿದ್ದಾರೆ.
ಕೊಚ್ಚಿ: ಮಹಿಳಾ ಪ್ರವಾಸಿಗರೊಬ್ಬರು ಕಳೆದುಕೊಂಡಿದ್ದ ದುಬಾರಿ ಐಫೋನ್ ಅನ್ನು ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚುವ ಮೂಲಕ ಕೇರಳದ ಪೊಲೀಸರು ತಮ್ಮ ವೃತ್ತಿಪರತೆ ಮೆರೆದಿದ್ದಾರೆ.
ಚಾಲಕುಡಿ ಮೂಲದ ಶಂಕರಿ ಸುಜಾ ಅವರು ಕೊಚ್ಚಿಯ ಪುತ್ತುವೈಪೆ ಬೀಚ್‌ಗೆ ಭೇಟಿ ನೀಡಿದಾಗ 2 ಲಕ್ಷ ರೂ. ಮೌಲ್ಯದ ಐಫೋನ್ 14 ಪ್ರೊ ಮ್ಯಾಕ್ಸ್ ಮೊಬೈಲ್ ಫೋನ್ ಕಳೆದುಕೊಂಡಿದ್ದರು. ವೈಜ್ಞಾನಿಕ ತನಿಖೆಯಿಂದ ಸ್ವಿಚ್ ಆಫ್ ಆಗಿದ್ದ ಫೋನ್ ಅನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಶಂಕರಿ ಅವರ ಪತಿ ಯುಎಸ್‌ಎಯಲ್ಲಿ ಕೆಲಸ ಮಾಡುತ್ತಿದ್ದಾರೆ. ಫೋನ್ನಲ್ಲಿ ಕೆಲಸಕ್ಕೆ ಸಂಬಂಧಿಸಿದ ಪ್ರಮುಖ ಡೇಟಾ ಇತ್ತು. ಮೇ 29 ರಂದು ಫೋನ್ ಕಳೆದುಹೋಗಿತ್ತು. ಶಂಕರಿ ಅವರು ಸುದೀರ್ಘ ಹುಡುಕಾಟದ ನಂತರ ಮುಳವುಕಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ತನಿಖೆಯ ನಡೆಸಿದಾಗ ಎರ್ನಾಕುಲಂ ನಾರ್ತ್ ರೈಲ್ವೇ ನಿಲ್ದಾಣ ಪ್ರದೇಶದಲ್ಲಿ ಫೋನ್ ಪತ್ತೆಯಾಯಿತು.
ಶಂಕರಿ ಸುಜಾ ಮತ್ತು ಅವರ ಸಂಬಂಧಿಕರು ಫೋನ್ ವಾಪಸ್ ಪಡೆದ ಖುಷಿಯಲ್ಲಿ ಪೊಲೀಸರನ್ನು ಶ್ಲಾಘಿಸಿ, ಧನ್ಯವಾದ ಅರ್ಪಿಸಿ ಹಿಂತಿರುಗಿದರು. ಮುಳವುಕಾಡು ಸಬ್ ಇನ್ಸ್ಪೆಕ್ಟರ್ ಎನ್.ಜೆ.ಸುನೇಖ್, ಎಎಸ್ಐ ನಾಸರ್, ಸಿವಿಲ್ ಪೊಲೀಸ್ ಅಧಿಕಾರಿಗಳಾದ ರಾಜೇಶ್, ಅರುಣ್ ಬಾಬು, ಸಿಬಿಲ್ ಭಾಸಿ ಅವರು ಫೋನ್ಗಾಗಿ ಹುಡುಕಾಟ ನಡೆಸಿದರು.