ಕಾಸರಗೋಡು: ಗಿರಿಜನ ಇಲಾಖೆಯು ವೆಸ್ಟ್‍ಎಳೇರಿ ಗ್ರಾಮ ಪಂಚಾಯಿತಿಯಲ್ಲಿ ಆಹಾರಧಾನ್ಯ ಪರಿಶಿಷ್ಟ ವರ್ಗ ಜನಾಂಗದವರಿಗಾಗಿ ಆಹಾರಧಾನ್ಯ ವಿತರಣಾ ಕಾರ್ಯಕ್ರಮ ಆರಂಭಿಸಿದೆ. ಹಾಸಿಗೆ ಹಿಡಿದವರು, ನಿರ್ಗತಿಕರು, ಅಂಗವಿಕಲರು ಮತ್ತು ಇತರ ದೈಹಿಕ ವಿಕಲಾಂಗತೆಗಳಿಂದ ಬಳಲುತ್ತಿರುವವರು, ಮತ್ತು ಇತರ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವವರಿಗೆ ಮಳೆಗಾಲದ ಆಹಾರ ಧಾನ್ಯಗಳನ್ನು ವಿತರಿಸುತ್ತಿದೆ. ಒಂದು ಕುಟುಂಬಕ್ಕೆ ತಿಂಗಳಿಗೆ 750 ರೂ. ಮೌಲ್ಯದ ಆಹಾರ ಧಾನ್ಯ ನೀಡಲಾಗುತ್ತದೆ.
ಮಳೆಗಾಲದಲ್ಲಿ ಹಳ್ಳಿಗಳಲ್ಲಿ ವಾಸಿಸುವವರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವ ಯೋಜನೆ ಇದಾಗಿದೆ. ವೆಸ್ಟ್ ಎಳ್ಳೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ಮೋಹನನ್ ಆಹಾರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಸಿ.ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿದ್ದರು. ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ವಿ.ಅಖಿಲಾ, ಆರೋಗ್ಯಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ.ತಂಗಚ್ಚನ್, ಸದಸ್ಯೆ ಓಮನಾ ಕುಞÂಕಣ್ಣನ್ ಉಪಸ್ಥಿತರಿದ್ದರು. ಟ್ರೈಬಲ್ ಅಧಿಕಾರಿ ಕೆ.ಬಾಬು ಸ್ವಾಗತಿಸಿದರು. ಪ್ರಮೋಟರ್ ಸಿ.ಪಿ.ರತೀಶ್ ವಂದಿಸಿದರು.