ತ್ರಿಶ್ಶೂರ್ (PTI): ಇಲ್ಲಿನ ಕೈಪಮಂಗಲಂ ಬಳಿ ಸೋಮವಾರ ಮುಂಜಾನೆ ಕಾರು ಹಾಗೂ ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಲಯಾಳ ಚಿತ್ರನಟ ಹಾಗೂ ಕಿರುತೆರೆ ಕಲಾವಿದ ಕೊಲ್ಲಂ ಸುಧಿ (39) ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತ್ರಿಶ್ಶೂರ್ (PTI): ಇಲ್ಲಿನ ಕೈಪಮಂಗಲಂ ಬಳಿ ಸೋಮವಾರ ಮುಂಜಾನೆ ಕಾರು ಹಾಗೂ ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಲಯಾಳ ಚಿತ್ರನಟ ಹಾಗೂ ಕಿರುತೆರೆ ಕಲಾವಿದ ಕೊಲ್ಲಂ ಸುಧಿ (39) ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದ ಇತರ ಕಲಾವಿದರಾದ ಉಲ್ಲಾಸ್ ಅರೂರ್, ಬಿನು ಅಡಿಮಾಲಿ ಮತ್ತು ಮಹೇಶ್ ಗಾಯಗೊಂಡಿದ್ದಾರೆ ಎಂದೂ ವಿವರಿಸಿದ್ದಾರೆ.
ಟಿ.ವಿ. ವಾಹಿನಿಯೊಂದರ ಕಾರ್ಯಕ್ರಮದ ಚಿತ್ರೀಕರಣ ಮುಗಿಸಿ ಮರಳುತ್ತಿದ್ದಾಗ ಇವರು ಸಂಚರಿಸುತ್ತಿದ್ದ ಕಾರು ಟ್ರಕ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂದೂ ತಿಳಿಸಿದ್ದಾರೆ. ಸುಧಿ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.
'ಕಟ್ಟಪ್ಪನಯಿಲೆ ಹೃತಿಕ್ ರೋಶನ್', 'ಕೇಶು ಈ ವೀಡಿಂಡೆ ನಾಥನ್', 'ವಗತಿರಿವು' ಸೇರಿದಂತೆ ಹಲವು ಸಿನಿಮಾಗಳಲ್ಲಿ ಸುಧಿ ಅವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದರು.
ಕಿರುತೆರೆಯ ಹಾಸ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಸುಧಿ ಅವರು ಕೇರಳದಲ್ಲಿ ಮನೆಮಾತಾಗಿದ್ದರು.