ಪಟ್ನಾ: 'ಜಮ್ಮು ಮತ್ತು ಕಾಶ್ಮೀರವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಯೋಗಾಲಯವಾಗಿದೆ' ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಶನಿವಾರ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ನಾ: 'ಜಮ್ಮು ಮತ್ತು ಕಾಶ್ಮೀರವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಯೋಗಾಲಯವಾಗಿದೆ' ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಶನಿವಾರ ಅಸಮಾಧಾನ ವ್ಯಕ್ತಪಡಿಸಿದರು.
ವಿರೋಧ ಪಕ್ಷಗಳ ಸಭೆ ನಡೆದ ಒಂದು ದಿನದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ವಾಸ್ತವದಲ್ಲಿ ಭಾರತದ ಕಲ್ಪನೆಯ ಮೇಲೆ ದಾಳಿ ನಡೆಯುತ್ತಿದೆ. ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯನ್ನು ರದ್ದುಪಡಿಸಿದಾಗ, ಅಲ್ಲಿನ ಮೂವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಹಲವು ನಾಯಕರನ್ನು ಜೈಲಿಗಟ್ಟಿತು' ಎಂದು ಅವರು ತಿಳಿಸಿದರು.
'ಸುಗ್ರೀವಾಜ್ಞೆಯನ್ನು ಹೊಡಿಸುವ ಮೂಲಕ ಕೇಂದ್ರವು ದೆಹಲಿಯಲ್ಲಿ ಯಾವ ಪರಿಸ್ಥಿತಿಯನ್ನು ಸೃಷ್ಟಿಸಿದೆಯೋ ಅಂಥದ್ದೇ ಪರಿಸ್ಥಿತಿ ಬಹಳ ಹಿಂದೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಉಂಟಾಗಿತ್ತು. ಆದರೆ ಕೆಲವರಿಗೆ ಇದು ತಡವಾಗಿ ಅರ್ಥವಾಗಿದೆ. ಒಂದು ವೇಳೆ 2024ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದರೆ, ಅದು ಸಂವಿಧಾನವನ್ನು ಧ್ವಂಸಗೊಳಿಸುತ್ತದೆ ಹಾಗೂ ಇಡೀ ದೇಶವನ್ನೇ ಕಾಶ್ಮೀರಿಕರಣ ಮಾಡುತ್ತದೆ' ಎಂದರು.