ತಿರುವನಂತಪುರಂ; ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಪೋಷಕರು ಮತ್ತು ಸಹೋದರರು ತಮ್ಮ ಮಗನನ್ನು ಪೋಕ್ಸೊ ಪ್ರಕರಣದಲ್ಲಿ ಸಿಲುಕಿಸಿದ್ದಾರೆ.
ತಿರುವನಂತಪುರಂ ವಟ್ಟಿಯೂರ್ಕಾವ್ ನಲ್ಲಿ ಅಪರೂಪದ ಘಟನೆ ನಡೆದು ನ್ಯಾಯಾಲಯದ ಕರುಣೆಯಿಂದ ನ್ಯಾಯ ದೊರಕಿ ಅಮಾಯಕ ಯುವಕನÀನ್ನು ರಕ್ಷಿಸಲಾಗಿದೆ. ರಾಜೇಶ್ ಆರ್ ನಾಯರ್ ಕುಲಶೇಖರಂ ಕೆಕೆಪಿ ನಗರದಲ್ಲಿ ನಕಲಿ ಪೋಕ್ಸೋ ಪ್ರಕರಣದಲ್ಲಿ ಸಿಕ್ಕಿಬಿದ್ದ ಅಮಾಯಕ.
ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಆಜ್ ಸುದರ್ಶನ್ ಅವರು ಯುವಕನÀನ್ನು ಖುಲಾಸೆಗೊಳಿಸಿದ್ದಾರೆ. ರಾಜೇಶನನ್ನು ಸಾಕಿದ್ದ ತಂದೆಯ ತಂಗಿಯ ಆಸ್ತಿಯನ್ನು ಹಸ್ತಾಂತರಿಸುವ ವಿವಾದದ ಹಿನ್ನೆಲೆಯಲ್ಲಿ ಯುವಕನನ್ನು ಪ್ರಕರಣದಲ್ಲಿ ಸಿಲುಕಿಸಲು ಆಪ್ತರು ನಿರ್ಧರಿಸಿದ್ದರು. ಬಳಿಕ ಅವರ ಪ್ಲಾನ್ ಪ್ರಕಾರ ರಾಜೇಶ್ ವಿರುದ್ಧ ಆರೋಪ ಮಾಡಲಾಗಿತ್ತು.
ಬಾಲಕಿಯ ಹತ್ತಿರದ ಸಂಬಂಧಿಯೊಬ್ಬರು ಕಿರುಕುಳ ನೀಡಿರುವುದು ಪ್ರಕರಣವಾಗಿತ್ತು. 2021ರಲ್ಲಿ ವಟ್ಟಿಯೂರ್ಕಾವ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಏತನ್ಮಧ್ಯೆ, ರಾಜೇಶ್ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ತಂದೆಯ ಸಹೋದರಿ ಡಿಜಿಪಿಯನ್ನು ಸಂಪರ್ಕಿಸಿದರು. ಇದು ಟನಿರ್ಂಗ್ ಪಾಯಿಂಟ್. ನಂತರದ ತನಿಖೆಯಲ್ಲಿ ದೂರು ಸುಳ್ಳು ಎಂದು ತಿಳಿದುಬಂದಿದೆ. ಆರೋಪಿ ಪರ ವಕೀಲ ಎಸ್.ಎಂ.ನೌಫಿ ಹಾಗೂ ಜಿ.ಪಿ.ಜಯಕೃಷ್ಣನ್ ವಾದ ಮಂಡಿಸಿದ್ದರು.