ಬದಿಯಡ್ಕ: ಬದಿಯಡ್ಕ ನವಜೀವನ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ವೃತ್ತಿಪರಿಚಯ, ಇಂಗ್ಲೀಷ್,ಕ್ಲಬ್ ಗಳು ಹಾಗೂ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಉದ್ಘಾಟನೆ ಇತ್ತೀಚೆಗೆ ಶಾಲೆಯಲ್ಲಿ ಜರಗಿತು.
ನಿವೃತ್ತ ಮುಖ್ಯೋಪಾಧ್ಯಾಯ ಶ್ಯಾಮ್ ಭಟ್ ದೀಪ ಬೆಳಗಿಸಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಕ್ಲಬ್ ಚಟುವಟಿಕೆಗಳು ಮಕ್ಕಳ ಕಲಿಕೆಗೆ ಪೂರಕವಾಗಿವೆ ಎಂದರು. ಶಾಲಾ ಮಾತೃ ಮಂಡಳಿಯ ಅಧ್ಯಕ್ಷೆ ಪ್ರಿಯಾ ಶುಭಾಶಂಸನೆಗೈದರು. ಮುಖ್ಯೋಪಾಧ್ಯಾಯಿನಿ ಮಿನಿ ಟೀಚರ್ ಅಧ್ಯಕ್ಷತೆ ವಹಿಸಿ ಭಿತ್ತಿಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ವಿದ್ಯಾ ಟೀಚರ್ ನೇತೃತ್ವದಲ್ಲಿ ಮಕ್ಕಳು ತಯಾರಿಸಿದ ಹೈಡ್ರೋಜನ್ ಬಲೂನನ್ನು ಅತಿಥಿಗಳು ಹಾರಿಸುವುದರ ಮೂಲಕ ಕ್ಲಬ್ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಸ್ವಾರಸ್ಯಕರವಾಗ ಗಣಿತ ಚಟುವಟಿಕೆಯನ್ನು ಮಕ್ಕಳು ಮಾಡಿದರು. ಹಿರಿಯ ಶಿಕ್ಷಕಿ ಪ್ರಭಾವತಿ ಕೆದಿಲಾಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೃಷ್ಣಕುಮಾರ್ ವಂದಿಸಿದರು. ಜ್ಯೋತ್ಸ್ನಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ನಿರಂಜನ್ ರೈ ಪೆರಡಾಲ, ರಾಜೇಶ್ ಮಾಸ್ತರ್, ತಂಗಮಣಿ ಟೀಚರ್ ಉಪಸ್ಥಿತರಿದ್ದರು.