ಮಂಜೇಶ್ವರ: ಕೇರಳ ಎಡರಂಗದ ಖಜಾನೆ ತುಂಬಿಸುವ ರಾಜ್ಯವಾಗಿದೆ. ವಂಚನೆ ಅವರ ಮೂಲಮಂತ್ರ, ರಾಜ್ಯದ ಆಡಳಿತ ಮುಖ್ಯಮಂತ್ರಿಯ ಕುಟುಂಬದ ಅಭಿವೃದ್ಧಿ ಗಾಗಿ, ಸದ್ದಿಲದೆ ಕೇರಳದಲ್ಲಿ ವಿದ್ಯುತ್ ದರ ಹೆಚ್ಚಿಸಲಾಗಿದೆ. ಮನೆ, ಕಟ್ಟಡ ತೆರಿಗೆ, ಭೂಮಿ ತೆರಿಗೆ ಹೆಸರಲ್ಲಿ ಲೂಟಿ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ರಂಜಿತ್ ಕಣ್ಣೂರು ತಿಳಿಸಿದರು.
ಹೊಸಂಗಡಿಯಲ್ಲಿ ಭಾನುವಾರ ಜರಗಿದ ಬಿಜೆಪಿ ಮಂಡಲ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಎಡರಂಗ ಸರ್ಕಾರ ಇದೀಗ ಮಾರ್ಗದಲ್ಲಿ ಕ್ಯಾಮರಾ ಸ್ಥಾಪಿಸಿ ಅಲ್ಲಿಯೂ ಲೂಟಿ ಆರಂಭಿಸಿದೆ. ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿರುವ ರಾಜ್ಯ ಸರ್ಕಾರದ ಜನದ್ರೋಹ ನೀತಿ ಜನರನ್ನು ಸಂಕಷ್ಟಕ್ಕೆ ದೂಡಿದೆ ಎಂದವರು ವಿವರಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಸತೀಶ್ಚಂದ್ರ ಭಂಡಾರಿ ಕೋಳಾರ್, ಎ ಕೆ ಕಯ್ಯಾರ್, ಸುಧಾಮ ಗೋಸಾಡ, ಮಣಿಕಂಠ ರೈ, ಜಯಲಕ್ಮಿ ಭಟ್, ಅಶ್ವಿನಿ ಪಜ್ವ, ಚಂದ್ರಿಕಾ ಕೀರ್ತೇಶ್ವರ, ಕೆ.ವಿ. ಭಟ್, ನಾರಾಯಣ ತುಂಗಾ, ಸದಾಶಿವ, ಸಂತೋಷ್ ದೈಗೊಳಿ, ಜನಪ್ರತಿನಿಧಿಗಳು ಉಪಸ್ಥಿತರಿದ್ದರು, ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ ಸ್ವಾಗತಿಸಿ, ತುಳಸಿ ಕುಮಾರಿ ವಂದಿಸಿದರು.