HEALTH TIPS

ಆಹಾರ, ಪಾನೀಯ ತಯಾರಿಕೆ ಮತ್ತು ವಿತರಣಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಮಕ್ಕಳ ಹಕ್ಕುಗಳ ಆಯೋಗ ನಿರ್ದೇಶ

 



           ಕಾಸರಗೋಡು: ರಾಜ್ಯದಲ್ಲಿ ಸಿಹಿತಿನಿಸುಗಳು, ತಂಪು ಪಾನೀಯಗಳನ್ನು ತಯಾರಿಸುವ ಮತ್ತು ವಿತರಿಸುವ ಎಲ್ಲಾ ಸಂಸ್ಥೆಗಳಲ್ಲಿ ನಿಯಮಿತ ತಪಾಸಣೆ ನಡೆಸುವಂತೆ ಮಕ್ಕಳ ಹಕ್ಕುಗಳ ಆಯೋಗವು ಆದೇಶಿಸಿದೆ. ಅಂತಹ ಸಂಸ್ಥೆಗಳಲ್ಲಿ ನೈರ್ಮಲ್ಯ ಮತ್ತು ವಸ್ತುಗಳ ತಯಾರಿ ಗುಣಮಟ್ಟವನ್ನೂ ಖಚಿತಪಡಿಸಿಕೊಳ್ಳಬೇಕು. ಬಹು ಬಣ್ಣದ ಕಾಗದ ಮತ್ತು ಪ್ಲಾಸ್ಟಿಕ್ ಚೀಲಗಳಲ್ಲಿ ಮಾರಾಟವಾಗುವ ಆಹಾರ ಪದಾರ್ಥಗಳ ಗುಣಮಟ್ಟ, ತಯಾರಿಸುವ ಸಂಸ್ಥೆಯ ಹೆಸರು, ಬಳಕೆ ಕಾಲಾವಧಿ ಮುಕ್ತಾಯ ದಿನಾಂಕವನ್ನು ಸ್ಪಷ್ಟವಾಗಿ ದಾಖಲಿಸಬೇಕು. ಇದಕ್ಕೆ ಹಿಂದೇಟು ಹಾಕುವ ಉತ್ಪಾದನಾ ಕಂಪನಿಗಳ ವಿರುದ್ಧ ಹಾಗೂ ವಿತರಣೆ ಮತ್ತು ಮಾರಾಟ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪರವಾನಗಿ ಇಲ್ಲದ ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು, ಸಾಫ್ಟ್ ಡ್ರಿಂಕ್ಸ್ ಔಟ್‍ಲೆಟ್‍ಗಳು ಮತ್ತು ಕೆಫೆಗಳು ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಸಂಸ್ಥೆಗಳ ಎಲ್ಲಾ ಉದ್ಯೋಗಿಗಳು ಆರೋಗ್ಯ ಕಾರ್ಡ್‍ಗಳನ್ನು ತೆಗೆದುಕೊಂಡಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಮಕ್ಕಳ ಹಕ್ಕುಗಳ ಆಯೋಗವು ಆಹಾರ ಸುರಕ್ಷತಾ ಆಯುಕ್ತರಿಗೆ ಸೂಚಿಸಿದೆ. ಆಯೋಗದ ಅಧ್ಯಕ್ಷ ಕೆ.ವಿ.ಮನೋಜ್ ಕುಮಾರ್ ಮತ್ತು ಸದಸ್ಯೆ ಪಿ.ಪಿ.ಶ್ಯಾಮಲಾದೇವಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಕಾಸರಗೋಡು ಜಿಲ್ಲೆಯಲ್ಲಿ ಶವರ್ಮ ಸೇವಿಸಿ ವಿದ್ಯರ್ಥಿನಿ ಮೃತಪಟ್ಟ ಘಟನೆ ಈ ಹಿಂದೆ ನಡೆದಿತ್ತು. ಸಿಹಿತಿನಿಸು ಪ್ಯಾಕೆಟ್‍ಗಳಲ್ಲಿ ವಂಚನೆ ಎಂಬ ಮಾಧ್ಯಮ ವರದಿ ಆಧರಿಸಿ ಆಯೋಗ ಸ್ವಯಂಪ್ರೇರಿತ ಕ್ರಮ ಕೈಗೊಂಡಿತ್ತು. ಜೂ. 30ರೊಳಗೆ ಕ್ರಮ ಕೈಗೊಂಡ ವರದಿಯನ್ನು ಆಯೋಗಕ್ಕೆ ನೀಡುವಂತೆಯೂ ಸೂಚಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries