ಕಾಸರಗೋಡು: ಪ್ರಾಚ್ಯವಸ್ತು ವಂಚನಾ ಪ್ರಕರಣಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ಬಂಧನ ಖಂಡಿಸಿ ಕೇರಳಾದ್ಯಂತ ಶನಿವಾರ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಕ್ರೈಂ ಬ್ರಾಂಚ್ ಇವರನ್ನು ಏಳುವರೆ ತಾಸುಗಳ ಕಾಲ ವಿಚಾರಣೆ ನಡೆಸಿದ ನಂತರ ಶುಕ್ರವರ ಬಂಧಿಸಿತ್ತು. ನಂತರ ತಲಾ 50ಸಾವಿರ ರೂ. ಮುಚ್ಛಳಿಕೆಯೊಂದಿಗೆ ಇಬ್ಬರು ವಯಕ್ತಿಗಳ ಜಾಮೀನಿನಲ್ಲಿ ಬಿಡುಗಡೆಗೊಳಿಸಿದೆ. ಈ ಬಂಧನ ರಾಜಕೀಯ ಪ್ರೇರಿತವಾಗಿದ್ದು, ಕಾನೂನು ಪ್ರಕರ ಎದುರಿಸುವುದಾಗಿ ಕೆ. ಸುಧಾಕರನ್ ತಿಳಿಸಿದ್ದಾರೆ.
ಕಾಞಂಗಾಡಿನಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಎ.ಫೈಸಲ್ ನೇತೃತ್ವದಲ್ಲಿ ಕಾಞಂಗಾಡು ಹಳೇ ಬಸ್‍ನಿಲ್ದಾಣ ವಠಾರದಲ್ಲಿ ರಸ್ತೆಯಲ್ಲಿ ಟಯರ್ ಉರಿಸಿ ತಡೆ ನಿರ್ಮಿಸಲಾಯಿತು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಧರಣಿ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಹಲವು ಹಗರಣಗಳಿಂದ ಜನರ ಗಮನ ಬೇರೆಡೆ ಸೆಳೆಯುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷರ ಮೇಲೆ ಸುಳ್ಳು ಕೇಸು ಹೇರಲಾಗಿದೆ. ಸರ್ಕರದ ವೈಫಲ್ಯ ಮುಚ್ಚಿಹಾಕಲು ಕಾಂಗ್ರೆಸ್ ಮುಖಂಡರನ್ನು ಜೈಲಿಗಟ್ಟುವ ಕ್ರಮ ಕೈಬಿಡದಿದ್ದಲ್ಲಿ ಪಕ್ಷದ ವತಿಯಿಂದ ಪ್ರಬಲ ಹೋರಾಟ ನಡೆಸಲಿರುವುದಾಗಿ ತಿಳಿಸಿದರು. ಕಾಂಗ್ರೆಸ್‍ನ ಹಿರಿಯ ಮುಖಮಡರು, ಮಹಿಳೆಯರು ಸಏರಿದಂತೆ ನೂರಾರು ಮಂದಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು.