ಮಂಜೇಶ್ವರ: ಪೈವಳಿಕೆ ಕಳಾಯಿ ನಿವಾಸಿ ಪ್ರಭಾಕರ ನೋಂಡ(42)ಕೊಲೆ ಪ್ರಕರಣದ ಎಲ್ಲ ಆರುಮಂದಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕೊಲೆಯಾದ ಪ್ರಭಾಕರ ನೋಂಡ ಅವರ ¸ಹೋದರ ಜಯರಾಮ ನೋಂಡ, ಇಸ್ಮಾಯಿಲ್, ಖಾಲಿದ್, ಕುಂಬಳೆ ಕಳತ್ತೂರಿನ ಮಹಮ್ಮದ್ ಶೆರೀಫ್, ಕಳತ್ತೂರು ಪಳ್ಳಂ ನಿವಾಸಿಗಳಾದ ಹಮೀದ್ ಯಾನೆ ಅಮ್ಮಿ ಹಾಗೂ ಅಬ್ದುಲ್ ಕರೀಂ ಯಾನೆ ಸಲೀಂ ನ್ಯಾಯಾಂಗಬಂಧನದಲ್ಲಿರುವವರು.ಪ್ರಮುಖ ಆರೋಪಿಗಳಾದ ಜಯರಾಮ ನೋಂಡ, ಇಸ್ಮಾಯಿಲ್ ಹಾಗೂ ಖಾಲಿದ್ ಅವರನ್ನು ಭಾನುವಾರ ಹಾಗೂ ಉಳಿದವರನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ.
ಕೊಲೆಗೆ ಬಳಸಿದ ಆಯುಧ ವಶ:
ಕೊಲೆ ಕೃತ್ಯಕ್ಕೆ ಬಳಸಿದ್ದ ಆಯುಧಗಳನ್ನು ಗೋಣಿಚೀಲದಲ್ಲಿ ತುಂಬಿಸಿ ಕಳತ್ತೂರಿನ ಜನವಾಸವಿಲ್ಲದ ಪ್ರದಶದಲ್ಲಿ ಎಸೆಯಲಾಗಿದ್ದು, ಆರೋಪಿಗಳು ನೀಡಿದ ಸೂಚನೆ ಮೇರೆಗೆ ಪೊಲೀಸರು ಇದನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಆಯುಧಗಳನ್ನು ಫೋರೆನ್ಸಿಕ್ ತಪಾಸಣೆಗೆ ಕಳುಹಿಸಲಾಗಿದೆ. ಹೆಚ್ಚಿನ ವಿಚಾರಣೆಗೆ ಒಳಪಡಿಸುವ ನಿಟ್ಟಿನಲ್ಲಿ ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಅರ್ಜಿಸಲ್ಲಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ಕಾಸರಗೋಡು ಡಿವೈಎಸ್‍ಪಿ ಪಿ.ಕೆ ಸುಧಾಕರನ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಕೊಲೆ ನಡೆದ 30ತಸುಗಳ ಒಳಗಾಗಿ ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿರುವುದು ಸಾರ್ವಜನಿಕರ ಶ್ಲಾಘನೆಗೆ ಕಾರಣವಾಗಿದೆ.