ಪತ್ತನಂತಿಟ್ಟ: ಮಡಕೆ ಸಹಿತ ಮದ್ಯ ತಯಾರಿಕೆಯ ವಿವಿಧ ಸಲಕರಣೆಗಳ ಸಹಿತ ಗೃಹಿಣಿಯೋರ್ವೆಯನ್ನು ಬಂಧಿಸಲಾಗಿದೆ. ಪತ್ತನಂತಿಟ್ಟ ಸೀತಾತ್ ಮೂಲದ ವಸಂತಿ ಎಂಬಾಕೆಯನ್ನು ಅಬಕಾರಿ ಪೋಲೀಸರು ಬಂಧಿಸಿದ್ದಾರೆ.
ವಸಂತಿ ಅವರಿಂದ 588 ಲೀಟರ್ ಅಕ್ರಮ ಮದ್ಯ ಮತ್ತು ಮದ್ಯ ತಯಾರಿಕೆಯ ಸಲಕರಣೆಗಳನ್ನು ಅಬಕಾರಿ ತಂಡ ವಶಪಡಿಸಿಕೊಂಡಿದೆ.
ಈ ಹಿಂದೆಯೂ ಪತ್ತನಂತಿಟ್ಟದಲ್ಲಿ ಇಂತಹ ಘಟನೆಗಳು ವರದಿಯಾಗಿದ್ದವು. ಕುಳನಾಡ ಪಾಣಂಗೆ ಎಂಬಲ್ಲಿ ಮದ್ಯ ಭಟ್ಟಿ ಇಳಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಪಂದಳಂ ಪೋಲೀಸರು ನಡೆಸಿದ ತಪಾಸಣೆಯಲ್ಲಿ ತನಿಖಾ ತಂಡವು ಸುಮಾರು ನಾಲ್ಕೂವರೆ ಲೀಟರ್ ನಕಲಿ ಮದ್ಯ ಮತ್ತು ಇತರ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದರು.