ಕುಂಬಳೆ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ, ಶಾರದಾ ಎಸ್ ಭಟ್ ಕಾಡಮನೆ ಅವರು, ಯೋಗದ ಮಹತ್ವವನ್ನು ತಿಳಿಸುತ್ತಾ "ಯೋಗವು ಆರೋಗ್ಯವನ್ನು ವೃದ್ಧಿಸುತ್ತದೆ, ಯೋಗದಿಂದ ಶ್ವಾಸೋಚ್ವಾಸ ಸುಗಮ ಹರಿವು ಸಾಧ್ಯ, ನಿತ್ಯಯೋಗಾಭ್ಯಾಸಿಗಳಾಗಿ" ಎಂದರು. ಶಾಲೆಯ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿ "ಜಗತ್ತಿಗೆ ಯೋಗವು ಭಾರತದ ಕೊಡುಗೆಯಾಗಿದೆ"ಎಂಬ ಸಂದೇಶ ನೀಡಿದರು.
ಮುಖ್ಯೋಪಾಧ್ಯಾಯ ಇ.ಎಚ್. ಗೋವಿಂದ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಿಕೆ ಎನ್. ಗಂಗಮ್ಮ ಶುಭಾಶಂಸನೆಗೈದರು. ಸೂರ್ಯನಾರಾಯಣ ಭಟ್ ಪಿ ವಂದಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು, ಶಿವಪ್ರಸಾದ್ ಸಿ ನಿರೂಪಿಸಿದರು. ಸಂತೋಷ್ ಕುಮಾರ್ ಎಂ, ಈಶ್ವರಿ ಡಿ, ವಿಚೇತಾ ಬಿ,ಸುನೀತ, ಶಶಿಕುಮಾರ್, ರಾಜಕುಮಾರ್ ಕೆ, ಕೇಶವ ಪ್ರಸಾದ್ ಇ, ದಿನೇಶ್ ಕೆ, ಸಹಕರಿಸಿದರು.