ವಾರಾಣಸಿ: ಜ್ಞಾನವಾಪಿ- ಶೃಂಗಾರ ಗೌರಿ ಸಂಕೀರ್ಣ ವಿವಾದದ ಪ್ರಮುಖ ಅರ್ಜಿದಾರ ಮಹಿಳೆಯೊಬ್ಬರು ತಮಗೆ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.
ವಾರಾಣಸಿ: ಜ್ಞಾನವಾಪಿ- ಶೃಂಗಾರ ಗೌರಿ ಸಂಕೀರ್ಣ ವಿವಾದದ ಪ್ರಮುಖ ಅರ್ಜಿದಾರ ಮಹಿಳೆಯೊಬ್ಬರು ತಮಗೆ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.
ಈ ಪ್ರಕರಣದ ಹಿಂದೂ ಅರ್ಜಿದಾರರಲ್ಲಿ ಒಬ್ಬರಾಗಿದ್ದ ರಾಖಿ ಸಿಂಗ್ ಅವರು ರಾಷ್ಟ್ರಪತಿಗಳಿಗೆ ಬರೆದಿರುವ ಪತ್ರದಲ್ಲಿ ' ಕೆಲವರು ನನಗೆ ಕಿರುಕುಳ ನೀಡುತ್ತಿದ್ದಾರೆ.
'ಇತರ ಅರ್ಜಿದಾರರು ತಮ್ಮ ಹೆಸರಿಗೆ ಮಸಿ ಬಳಿಯುವಂತೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಈ ಪ್ರಕರಣದಿಂದ ಹಿಂದೆ ಸರಿಯುತ್ತಿರುವೆ' ಎಂದು ರಾಖಿ ಸಿಂಗ್ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಹಿಂದೂ ಅರ್ಜಿದಾರರನ್ನು ಪ್ರತಿನಿಧಿಸುತ್ತಿರುವ ವಕೀಲ ಹರಿಶಂಕರ್ ಜೈನ್, ರಾಖಿ ಸಿಂಗ್ ಅವರ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ಮಾತಾ ಶೃಂಗಾರಗೌರಿ ಸ್ಥಳದಲ್ಲಿ ನಿತ್ಯ ಪೂಜೆ ಸಲ್ಲಿಸುವ ಹಕ್ಕನ್ನು ಕೋರಿ ರಾಖಿ ಸಿಂಗ್ ಮತ್ತು ಇತರ ನಾಲ್ವರು ಹಿಂದೂ ಮಹಿಳೆಯರು ವಾರಾಣಸಿಯ ಸಿವಿಲ್ ನ್ಯಾಯಾಧೀಶರ (ಹಿರಿಯ ವಿಭಾಗ) ನ್ಯಾಯಾಲಯಕ್ಕೆ 2021ರ ಆಗಸ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.