HEALTH TIPS

ವರದಿಗಾರರು ನಿಖರ ಸುದ್ದಿಯ ಪ್ರತಿಪಾದಕರು - ವಿರಾಜ್ ಅಡೂರು

             ಬದಿಯಡ್ಕ : ವರದಿಗಾರರು ತಮಗೆ ದೊರೆತ ಸುದ್ದಿಯ ನಿಖರತೆ, ಸತ್ಯಾಸತ್ಯತೆಯನ್ನು ವಿಮರ್ಶಿಸದೆ ಸುದ್ದಿ ಮಾಡಬಾರದು. ಸುದ್ದಿಗಳು ಪ್ರಕಟವಾಗದಿದ್ದರೂ ಅಪರಾಧವಲ್ಲ. ಆದರೆ ಸುಳ್ಳು ಅಥವಾ ಅಪಕ್ವ ಸುದ್ದಿಗಳಿಂದ ವರದಿಗಾರರಿಗೆ ಹಾಗೂ ಪತ್ರಿಕೆಗೆ ಕಳಂಕ ಬರುತ್ತದೆ. ಆದ್ದರಿಂದ ವರದಿಗಾರರು ಸುದ್ದಿಯ ಬಗ್ಗೆ ಸೂಕ್ಷ್ಮ ಹಾಗೂ ಜಾಗ್ರತೆಯಿಂದ ಕೆಲಸ ಮಾಡಬೇಕು' ಎಂದು ಪತ್ರಕರ್ತ, ಸಾಹಿತಿ ವಿರಾಜ್ ಅಡೂರು ಹೇಳಿದರು.

         ಅವರು ಭಾನುವಾರ ನೀರ್ಚಾಲಿನ ಕುಮಾರಸ್ವಾಮಿ ಭಜನಾ ಮಂದಿರದಲ್ಲಿ ಕರ್ನಾಟಕ ಸರ್ಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ನಡೆದ ಗ್ರಾಮ ಪರ್ಯಟನೆಯ 3ನೇ ಸರಣಿ ಕಾರ್ಯಕ್ರಮದಲ್ಲಿ 'ಗಡಿನಾಡಿನಲ್ಲಿ ವರದಿಗಾರಿಕೆಯ ಸವಾಲುಗಳು' ಎಂಬ ವಿಚಾರದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. 


        'ವರದಿಗಾರಿಕೆಯು ವ್ಯಕ್ತಿಯ ವಿಶೇಷ ಕೌಶಲವಾಗಿದ್ದು, ಭಾಷೆಯ ಹಿಡಿತ, ಕನಿಷ್ಠ ಪದಗಳ ಬಳಕೆಯಿಂದ ವಿಸ್ತಾರವಾದ ಮಾಹಿತಿ, ವರದಿಯನ್ನು ಓದಿಸುವ ಆಕರ್ಷಣೆ, ವಿಶೇಷವಾದ ಸೂಕ್ಷ್ಮಪ್ರಜ್ಞೆ, ಸಾಮಾಜಿಕ ಕಾಳಜಿ ಮೊದಲಾದ ವಿಚಾರಗಳಿಂದ ಮಾತ್ರ ಉತ್ತಮ ವರದಿಗಳನ್ನು ನಿರ್ಮಾಣ ಮಾಡಲು ಸಾಧ್ಯ. ಸಾಹಿತಿಯಾದವರೆಲ್ಲರೂ ಪತ್ರಕರ್ತರಾಗಲು ಸಾಧ್ಯವಿಲ್ಲ. ವರದಿಗಾರರೆಲ್ಲರೂ ಸಾಹಿತಿಗಳಾಗಲು ಸಾಧ್ಯವಿಲ್ಲ. ಈ ಎರಡೂ ಕ್ಷೇತ್ರಗಳ ವಿಚಾರಧಾರÉಯೂ ಪ್ರತ್ಯೇಕವಾಗಿದೆ. ಆದರೆ ಎರಡೂ ವಿಭಾಗಗಳಿಗೂ ಅಧ್ಯಯನ ಹಾಗೂ ಬರವಣಿಗೆ ಮುಖ್ಯ. ಕಾಸರಗೋಡು ಜಿಲ್ಲೆಯಲ್ಲಿ ಕರ್ನಾಟಕ ಹಾಗೂ ಕೇರಳದ ಅನೇಕ ಪತ್ರಿಕೆಗಳ ವರದಿಗಾರರಿದ್ದು, ಬಹುತೇಕ ಎಲ್ಲರೂ ಕೂಡಾ ಅರೆಕಾಲಿಕ ವರದಿಗಾರರು. ಪ್ರವೃತ್ತಿಯಾಗಿ ಪತ್ರಿಕೋದ್ಯಮವನ್ನು ಅವಲಂಬಿಸಿದ್ದಾರೆ. ಜಿಲ್ಲೆಯ ಪತ್ರಕರ್ತರಿಗೆ ಸಾಕಷ್ಟು ಜೀವನ ಭದ್ರತೆ ಇಲ್ಲ. ಪ್ರಸ್ತುತ ಓದುಗರ ಕೊರತೆಯಿಂದಾಗಿ ವರದಿಗಾರರ ಆದಾಯಕ್ಕೂ ಹೊಡತ ಬಿದ್ದಿದ್ದು, ಕೇರಳ ಸರ್ಕಾರವು ಅವರನ್ನು ಆಧರಿಸಬೇಕಾಗಿದೆ. ಪಿಂಚಣಿ ಸಹಿತ ಎಲ್ಲಾ ಸೌಲಭ್ಯವನ್ನು ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ ನೀಡಬೇಕಾಗಿದೆ' ಎಂದು ಹೇಳಿದರು. 

        ಸಭೆಯ ಅಧ್ಯಕ್ಷತೆಯನ್ನು ರಂಗಸಿರಿ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ವಹಿಸಿದ್ದರು. ಈ ಸಂದರ್ಭದಲ್ಲಿ  ಹಿರಿಯ ಯಕ್ಷಗಾನ ಕಲಾವಿದ ಬಾಲಕೃಷ್ಣ ಆಚಾರಿ ನೀರ್ಚಾಲು ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ..ಸದಸ್ಯೆ ಸ್ವಪ್ನ ಹರೀಶ್, ಯಕ್ಷಗಾನ ಹಿಮ್ಮೇಳ-ಮುಮ್ಮೇಳ ಗುರುಗಳಾದ ಬಾಯಾರು ಸೂರ್ಯನಾರಾಯಣ ಪದಕಣ್ಣಾಯ, ರಂಗಸಿರಿ ಸಂಸ್ಥೆಯ ಕೋಶಾಧಿಕಾರಿ ರಾಜೇಂದ್ರ ವಾಂತಿಚ್ಚಾಲು ಮೊದಲಾದವರು ಇದ್ದರು. ರಂಗಸಿರಿ ಸಂಸ್ಥೆಯ ಕಾರ್ಯದರ್ಶಿ  ಡಾ. ಶ್ರೀಶ ಕುಮಾರ ಪಂಜಿತ್ತಡ್ಕ ಸ್ವಾಗತಿಸಿದರು. ಅಭಿಜ್ಞಾ ಬೋಳಂಬು ವಂದಿಸಿದರು. ಶಶಿಧರ ಕುದಿಂಗಿಲ ಕಾರ್ಯಕ್ರಮ ನಿರೂಪಿಸಿದರು. ನಂತರ ಕೇಶವ ಕಿನ್ಯ, ಪದ್ಮನಾಭ ಮಲ್ಲ, ರಾಜೇಂದ್ರ ವಾಂತಿಚ್ಚಾಲ್ ಅವರ ಮಾರ್ಗದರ್ಶನದಲ್ಲಿ ವೇಷಭೂಷಣಗಳ ಪರಿಚಯ, ಪ್ರಾತ್ಯಕ್ಷಿಕೆ ಹಾಗೂ ಪ್ರಾಯೋಗಿಕ ಶಿಬಿರವು ನಡೆಯಿತು. ಶಿಬಿರಾರ್ಥಿಗಳಾಗಿ ಸುಮಾರು 20ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries