ತಿರುವನಂತಪುರಂ: ಜನವಸತಿ ಪ್ರದೇಶಗಳಿಗೆ ನುಗ್ಗುವ ಕಾಡುಹಂದಿಗಳನ್ನು ಹೊಡೆದುರುಳಿಸುವ ಆದೇಶವನ್ನು ಇನ್ನೂ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ.
ಜೀವ ಮತ್ತು ಆಸ್ತಿ ನಾಶಕ್ಕೆ ಕಾರಣವಾಗುವ ಕಾಡುಹಂದಿಗಳನ್ನು ಕೊಲ್ಲಲು ಅನುಮತಿಯನ್ನು ವಿಸ್ತರಿಸಲು ಅರಣ್ಯ ಇಲಾಖೆಯ ಮನವಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಕಳೆದ ವರ್ಷ ಮೇ 28ರಂದು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಕಾಡು ಹಂದಿಗಳನ್ನು ಹೊಡೆದು ಹನನಗೈಯ್ಯಲು ಸರ್ಕಾರ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಒಂದು ವರ್ಷಕ್ಕೆ ಅನುಮತಿ ನೀಡಲಾಗಿತ್ತು. ಇದರೊಂದಿಗೆ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಿಗೂ ಆಕ್ರಮಣಕಾರಿ ಕಾಡುಹಂದಿಗಳನ್ನು ಹೊಡೆದು ಸಾಯಿಸುವ ಅಧಿಕಾರ ನೀಡಲಾಯಿತು. ಈ ಆದೇಶವನ್ನು ಮತ್ತೆ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ.