ಕಾಸರಗೋಡು: ದೇವಾಲಯಗಳು ಧಾರ್ಮಿಕ ವಿಧಿವಿಧಾನಗಳ ಜತೆಗೆ ಆಧ್ಯಾತ್ಮಿಕ, ಸಾಂಸ್ಕøತಿಕ ಕೇಂದ್ರಗಳಾಗಬೇಕು ಎಂದು ಚಿನ್ಮಯ ಮಿಷನ್ ಕೇರಳ ಘಟಕದ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಹೇಳಿದರು. ಅವರು ಎರೋಳ್ ಅಂಬಲತ್ತಿಕಲ್ ವಿಷ್ಣುಮೂರ್ತಿ ದೇವಸ್ಥಾನದ ಪುನ:ಪ್ರತಿಷ್ಠಾ ಕಲಶೋತ್ಸವ ಅಂಗವಾಗಿ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಸಿ ಆಶೀರ್ವಚನ ನೀಡಿದರು. ಭಾರತೀಯ ಸಂಸ್ಕೃತಿಯ ಅಪಮೌಲ್ಯೀಕರಣದ ಈ ಕಾಲಘಟ್ಟದಲ್ಲಿ ದೇವಾಲಯಗಳಲ್ಲಿ ಆಧ್ಯಾತ್ಮಿಕ ಅಧ್ಯಯನಕ್ಕೆ ಪೂರಕವಾದ ಸಾಂಸ್ಕøತಿಕ ಕೇಂದ್ರಗಳ ಚಟುವಟಿಕೆ ಅನಿವಾರ್ಯ ಎಂದು ತಿಳಿಸಿದರು.
ಆಚರಣಾ ಸಮಿತಿ ಅಧ್ಯಕ್ಷ ಪಿ. ಭಾಸ್ಕರನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ. ಲಕ್ಷ್ಮಿ ಸಮಾರಂಭ ಉದ್ಘಾಟಿಸಿದರು. ಉದುಮ ಪಂಚಾಯತ್ ಸದಸ್ಯೆ ಕಸ್ತೂರಿಬಾಲನ್, ಕರಿಕಾಟ್ ಶಾಸ್ತಾವು ವಿಷ್ಣು ದೇವಸ್ಥಾನದ ಅಧ್ಯಕ್ಷ ಎ.ಶಶಿಧರನ್ ನಾಯರ್ ಕಟ್ಟಿಪಾರ, ಎರೋಲ್ ಕಾವ್ ವೈಷ್ಣವಿ ಭಗವತಿ ದೇವಸ್ಥಾನದ ಅಧ್ಯಕ್ಷ ಎ. ಗೋಪಾಲನ್ ನಾಯರ್, ಪಾತಿಕಲ್ ತರವಾಡು ಸಮಿತಿ ಅಧ್ಯಕ್ಷ ನಾರಾಯಣನ್ ಅರಮಂಗಾನಂ, ದೇವಸ್ಥಾನ ನಿರ್ಮಾಣ ಸಮಿತಿ ಸಹ ಸಂಚಾಲಕ ರಾಜನ್ ಮಾಸ್ಟರ್, ಉಪಾಧ್ಯಕ್ಷ ಬಿ.ನಾರಾಯಣನ್, ಯುಎಇ ಸಮಿತಿ ಸೆಕ್ರೇಟರಿ ಇ.ವಿ. ಸುಜಿತ್ ಉಪಸ್ಥಿತರಿದ್ದರು.