ಕಾಸರಗೋಡು: ಟ್ರಾಲಿಂಗ್ ನಿಷೇಧ ಜಾರಿ ಸಂದರ್ಭ ಜಿಲ್ಲೆಯಲ್ಲಿ ಅನ್ಯ ರಾಜ್ಯಗಳ ರಾಸಾಯನಿಕ ಮಿಶ್ರಿತ ಮೀನು ಮಾರಾಟವಾಗದಂತೆ ವಿಶೇಷ ದಳ ರಚಿಸುವುದರ ಜತೆಗೆ ಮಿಂಚಿನ ಕಾರ್ಯಾಚರಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ.ಇಭಾ ಶೇಖರ್ ತಿಳಿಸಿದ್ದಾರೆ. ವಿಶೇಷ ತಂಡವು ಕರ್ನಾಟಕ-ಕೇರಳ ಗಡಿಯಲ್ಲಿರುವ ತಲಪಾಡಿ ಸೇರಿದಂತೆ ವಿವಿಧ ಗಡಿ ಪ್ರದೇಶಗಳಲ್ಲಿ ವಾಹನಗಳ ತಪಾಸಣೆ ನಡೆಸಲಿದೆ. ಮೀನುಗಾರಿಕೆ ಉಪನಿರ್ದೇಶಕ ಪಿ.ವಿ.ಸತೀಶನ್ ಅವರು ಮೀನುಗಾರಿಕೆ, ಆಹಾರ ಸುರಕ್ಷತೆ ಮತ್ತು ಪೆÇಲೀಸ್ ಇಲಾಖೆಗಳನ್ನು ಒಳಗೊಂಡಿರುವ ತಂಡವನ್ನು ಮುನ್ನಡೆಸಲಿದ್ದಾರೆ. ರಾಸಾಯನಿಕ ಮಿಶ್ರಿತ ಮೀನು ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಜಿಲ್ಲಾ ಮೀನುಗಾರಿಕೆ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಜಿಲ್ಲಾಧಿಕಾರಿ ಕೆ. ಇಭಾಶೇಖರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಚೇಂಬರ್ನಲ್ಲಿ ನಡೆದ ಸಭೆಯಲ್ಲಿ ಮೀನುಗಾರಿಕಾ ಉಪನಿರ್ದೇಶಕ ಪಿ.ವಿ.ಸತೀಶನ್ ವರದಿ ಮಂಡಿಸಿದರು. ಮೀನುಗಾರರ ಸಂಘಟನೆ ಪ್ರತಿನಿಧಿಗಳಾದ ಕಾಟಾಡಿ ಕುಮಾರನ್, ಆರ್.ಗಂಗಾಧರನ್, ಬಿ.ಎಂ.ಅಶ್ರಫ್, ಮೀನುಗಾರಿಕಾ ಸಂಘಟನೆ ಪ್ರತಿನಿಧೀಗಳು, ಮೀನುಗಾರರು ಉಪಸ್ಥಿತರಿದ್ದರು.
ಗುರುತಿನ ದಾಖಲೆ ಕಡ್ಡಾಯ:
ಆಳಸಮುದ್ರ ಮೀನುಗಾರಿಕೆಗೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ದೋಣಿಗಳಲ್ಲಿನ ಕಾರ್ಮಿಕರು ಸೂಕ್ತ ಗುರುತಿನಚೀಟಿಯೊಂದಿಗೆ ದಾಖಲೆಗಳನ್ನು ಆಯಾ ದೋಣಿ ಮಾಲೀಕರು ನಿರ್ವಹಿಸಬೇಕಾಗಿದೆ. ಅವೈಜ್ಞಾನಿಕ ಮೀನುಗಾರಿಕೆಯನ್ನು ತಪ್ಪಿಸಿ, ಮೀನುಗಾರಿಕೆಯಲ್ಲಿ ಬಾಲಕರನ್ನು ತೊಡಗಿಸಿಕೊಳ್ಳುವವರ ಹಗೂ ಇಂತಹ ದೋಣಿ ಮಾಲಿಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮತ್ತು ತಪಾಸಣೆಯನ್ನು ಬಲಪಡಿಸಲೂ ತೀರ್ಮಾನಿಸಲಾಯಿತು.