ತಿರುವನಂತಪುರಂ: ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಪ್ರಮುಖ ಮಲಯಾಳಿ ಯೂಟ್ಯೂಬರ್‍ಗಳ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ನಟಿ ಮತ್ತು ನಿರೂಪಕಿ ಪರ್ಲಿ ಮಣಿ, ಸೆಬಿನ್ ಮತ್ತು ಸಾಜು ಮುಹಮ್ಮದ್ ಸೇರಿದಂತೆ ಸುಮಾರು ಹತ್ತು ಯೂಟ್ಯೂಬರ್‍ಗಳ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತಿದೆ.
ಕೇರಳದ ಹಲವು ಯೂಟ್ಯೂಬರ್‍ಗಳ ವಾರ್ಷಿಕ ಆದಾಯ ಎರಡು ಕೋಟಿಯವರೆಗೂ ಇದೆ. ಚಂದಾದಾರರ ಸಂಖ್ಯೆ 35 ಲಕ್ಷಕ್ಕೂ ಹೆಚ್ಚು. ಅದರಿಂದ ಅವರಿಗೆ ಸಾಕಷ್ಟು ಆದಾಯ ಬರುತ್ತದೆ. ಆದರೆ ಆದಾಯ ತೆರಿಗೆ ಇಲಾಖೆಗೆ ಅವರು ತಮ್ಮ ಆದಾಯಕ್ಕೆ ತಕ್ಕಂತೆ ತೆರಿಗೆ ಕಟ್ಟುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ. ತೆರಿಗೆ ವಂಚನೆಗೆ ಸಂಬಂಧಿಸಿದ ತನಿಖೆಯಲ್ಲಿ, ಯೂಟ್ಯೂಬರ್‍ಗಳ ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮುಖ್ಯವಾಗಿ ಪರಿಶೀಲಿಸಲಾಗುತ್ತದೆ.