ಕವರಟ್ಟಿ: ಲಕ್ಷದ್ವೀಪ ಸಂಸದ ಮುಹಮ್ಮದ್ ಫೈಸಲ್ ಕಚೇರಿ ಹಾಗೂ ಮನೆ ಮೇಲೆ ಇಡಿ ದಾಳಿ ನಡೆಸಿದೆ. ಶ್ರೀಲಂಕಾಕ್ಕೆ ಮೀನು ಸಾಗಣೆ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ.
ದೆಹಲಿಯಲ್ಲಿರುವ ಫೈಸಲ್ ಅವರ ಅಧಿಕೃತ ನಿವಾಸ, ಲಕ್ಷದ್ವೀಪದಲ್ಲಿರುವ ಅವರ ಮನೆ ಮತ್ತು ಕೊಚ್ಚಿಯಲ್ಲಿರುವ ಅವರ ಸ್ನೇಹಿತನ ಮನೆ ಮೇಲೆ ದಾಳಿ ನಡೆಸಲಾಗಿದೆ.
ಹಣಕಾಸು ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ಇಡಿ ಸಂಗ್ರಹಿಸಿದೆ. ಇದನ್ನು ಪರಿಶೀಲಿಸಿದ ನಂತರ ಫೈಸಲ್ ಅವರನ್ನು ವಿಚಾರಣೆಗೆ ಕರೆಯಲಾಗುವುದು ಎಂದು ವರದಿಯಾಗಿದೆ. ಈ ಹಿಂದೆ ಲಕ್ಷದ್ವೀಪದಿಂದ ಶ್ರೀಲಂಕಾಕ್ಕೆ ಮೀನು ಸಾಗಾಟದಲ್ಲಿ ಅಧಿಕಾರಿಗಳು ಸೇರಿದಂತೆ ಭ್ರಷ್ಟಾಚಾರದ ಪ್ರಕರಣವನ್ನು ಸಿಬಿಐ ದಾಖಲಿಸಿತ್ತು.
ಇದರ ಬೆನ್ನಲ್ಲೇ ಇಡಿ ಫೈಸಲ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಈ ಪ್ರಕರಣದ ಭಾಗವಾಗಿ ದಾಳಿ ನಡೆಸಲಾಗುತ್ತಿದೆ.