HEALTH TIPS

ಕೇರಳದಲ್ಲಿ ಸದ್ಯಕ್ಕಿಲ್ಲ ನಂದಿನಿ ಮಳಿಗೆ; ವಿಸ್ತರಣೆ ಯೋಜನೆ ಸ್ಥಗಿತಗೊಳಿಸಿದ ಕರ್ನಾಟಕ ಸರ್ಕಾರ!

           ಬೆಂಗಳೂರು: ಕೇರಳದಲ್ಲಿ ನಂದಿನಿ (Nandini Milk) ಹಾಲಿನ ಡೈರಿಯ ವಿಸ್ತರಣೆ ಮಾಡುವ ಕೆಎಂಎಫ್ ಪ್ರಯತ್ನಕ್ಕೆ ಹಿನ್ನಡೆಯಾಗಿದ್ದು, ವಿಸ್ತರಣೆ ಯೋಜನೆ ಸ್ಥಗಿತಗೊಳಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

            ಈ ಬಗ್ಗೆ ಕೇರಳ ಡೈರಿ ಅಭಿವೃದ್ಧಿ ಮತ್ತು ಹಾಲು ಸಹಕಾರಿಗಳ ಸಚಿವ ಜೆ ಚಿಂಚುರಾಣಿ ಅವರು ಮಾಹಿತಿ ನೀಡಿದ್ದು, ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) ಸಿಇಒ ಅವರಿಂದ ಕೇರಳದ ಹಾಲಿನ ಡೈರಿಗಳಲ್ಲಿ ನಂದಿನಿ ಬ್ರಾಂಡ್​​ನ ಹಾಲುಗಳನ್ನು ಮಾರಾಟದ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದು ಹೇಳಿದರು.

             ಕೇರಳದಲ್ಲಿ ನಂದಿನಿ ಹಾಲಿನ ಡೈರಿಯ ವಿಸ್ತರಣೆ ಮಾಡದಂತೆ ಕೇರಳ ಸರ್ಕಾರ ಈ ಹಿಂದೆಯೇ ಒಂದು ಆದೇಶವನ್ನು ನೀಡಿತ್ತು. ಇದು ಕರ್ನಾಟಕದ ಮತ್ತು ಕೇರಳದ ನಡುವೆ ದೊಡ್ಡ ಮಟ್ಟದ ಗದ್ದಲಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಕೇರಳ ಸರ್ಕಾರ ರಾಜ್ಯದಲ್ಲಿ ನಂದಿನಿ ಹಾಲಿನ ಡೈರಿಗಳನ್ನು ವಿಸ್ತರಣೆ ಮಾಡದಂತೆ, KMF ಸಿಇಒ ಜತೆಗೆ ಮಾತುಕತೆ ನಡೆಸಿದೆ. ಪರಿಣಾಮ ನಂದಿನಿ (Nandini Milk) ಹಾಲಿನ ಡೈರಿಯ ವಿಸ್ತರಣೆ ಮಾಡುವ ಕೆಎಂಎಫ್ ಪ್ರಯತ್ನಕ್ಕೆ ಹಿನ್ನಡೆಯಾಗಿದ್ದು, ವಿಸ್ತರಣೆ ಯೋಜನೆ ಸ್ಥಗಿತಗೊಳಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಸದ್ಯಕ್ಕೆ ನಂದಿನಿ ಹೊಸ ಮಳಿಗೆಗಳನ್ನು ತೆರೆಯುವುದಿಲ್ಲ ಎಂಬ ಮಾಹಿತಿಯನ್ನು KMFನ ಸಿಇಒ ಹೇಳಿದ್ದಾರೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದ್ದಾರೆ. 

             ಕೆಎಂಎಫ್ ನಿರ್ಧಾರವನ್ನು ಸಚಿವರಾದ ಚಿಂಚುರಾಣಿ ಸ್ವಾಗತಿಸಿದ್ದು, ಕರ್ನಾಟಕದಲ್ಲಿ ಸರ್ಕಾರ ಬದಲಾವಣೆಯಾದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟದ (ಕೆಸಿಎಂಎಂಎಫ್) ಮಿಲ್ಮಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾತ್ರ ನಮ್ಮ ರಾಜ್ಯದ ಜನರು ಬಯಸುತ್ತಾರೆ ಎಂದು ಅವರು ಹೇಳಿದರು.

                 ಕೇರಳದಲ್ಲಿ ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್ ಸರ್ಕಾರವು ಕರ್ನಾಟಕದ ನಂದಿನಿ ಹಾಲು ಮತ್ತು ಡೈರಿ ಉತ್ಪನ್ನಗಳ ರಾಜ್ಯಕ್ಕೆ ಪ್ರವೇಶಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಈ ಸಮಸ್ಯೆಯನ್ನು ಬಗೆಹರಿಸುವಂತೆ ಕೇರಳ ಸರ್ಕಾರ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಗೆ (ಎನ್‌ಡಿಡಿಬಿ) ದೂರು ಸಲ್ಲಿಸಿತ್ತು. ನಂದಿನಿ ಮತ್ತು ಮಿಲ್ಮಾ ಎರಡೂ ಸರ್ಕಾರಿ ಬೆಂಬಲಿತ ಸಂಸ್ಥೆಗಳಾಗಿದ್ದು, ಒಂದು ಉತ್ಪನ್ನ ಬೇರೆ ರಾಜ್ಯಕ್ಕೆ ಹೋಗುವಾಗ ಆ ರಾಜ್ಯದ ಅನುಮತಿ ಪಡೆಯಬೇಕಿತ್ತು ಎಂದು ಚಿಂಚುರಾಣಿ ಈ ಹಿಂದೆ ಹೇಳಿದ್ದರು. ಆದರೆ ಕರ್ನಾಟಕಯ ಕ್ರಮವನ್ನು ಅನುಸರಿಸಿಲ್ಲ ಎಂದು ಹೇಳಿದ್ದಾರೆ.

                   ಕೆಎಂಎಫ್ ನಂದಿನಿ ಹಾಲು ಮತ್ತು ಇತರ ಉತ್ಪನ್ನಗಳನ್ನು ಮಾರಾಟ ಮಾಡಲು ಕೇರಳದ ಕೆಲವು ಭಾಗಗಳಲ್ಲಿ ತನ್ನ ಮಳಿಗೆಗಳನ್ನು ತೆರೆಯುವ ಕ್ರಮವನ್ನು ಕೇರಳ ಸರ್ಕಾರ ವಿರೋಧಿಸಿದೆ. ಕೇರಳದ ರೈತರು ಡೈರಿಗೆ ನೀಡುವ ಹಾಲುಗಳನ್ನು ಏನು ಮಾಡಬೇಕು. ರೈತರ ಅನುಕೂಲಕ್ಕಾಗಿ ದೇಶದ ಡೈರಿ ಕ್ಷೇತ್ರವನ್ನು ಆಯೋಜಿಸಿರುವ ಸಹಕಾರಿ ಮನೋಭಾವದ ಸಂಪೂರ್ಣ ಉಲ್ಲಂಘನೆ ಮಾಡಿದೆ ಎಂದು ಮಿಲ್ಮಾ ಒಕ್ಕೂಟ ಹೇಳಿದೆ.

                ನಂದಿನಿ ಹಾಲಿನ  ಜತೆಗೆ ಎರಡು ರಾಜ್ಯಗಳು ಯುದ್ಧಕ್ಕೆ ನಿಂತಂತಾಗಿದೆ. ಅಂದು ಗುಜರಾತಿನ ಅಮುಲ್​​ ಬ್ರಾಂಡಿನ ಹಾಲು ಬೇಡ ಎಂದು ಕರ್ನಾಟಕ​​, ಇಂದು ಕರ್ನಾಟಕದ ನಂದಿನಿ ಹಾಲು ಬೇಡ ಎಂದು ಕೇರಳ ಅಪಸ್ವರ ತೆಗೆದಿತ್ತು. ಗುಜರಾತಿನ​​ ಅಮುಲ್​​ನ್ನು​​ ಕರ್ನಾಟಕದಲ್ಲಿ ಮಾರಾಟ ಮಾಡುವುದು ಬೇಡ ಎಂದಿತ್ತು. ಇದೀಗ ಕೇರಳ ತನ್ನ ರಾಜ್ಯದಲ್ಲಿ ನಂದಿನಿ ಬೇಡ ಎಂದು ಹೇಳುತ್ತಿದೆ. ರಾಜ್ಯದಲ್ಲಿ ನಂದಿನಿ ಹಾಲಿನ ಡೈರಿಗಳನ್ನು ವಿಸ್ತರಣೆ ಮಾಡದಂತೆ ಕೇರಳ ಸರ್ಕಾರ ಆದೇಶವನ್ನು ನೀಡಿದೆ. 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries