ತಿರುವನಂತಪುರಂ: ರಾಜ್ಯದಲ್ಲಿ ಏಕಾಏಕಿ ಬೆಲೆ ಏರಿಕೆಯಾಗಿರುವ ಬಗ್ಗೆ ಆಹಾರ ಸಚಿವ ಜಿ.ಆರ್.ಅನಿಲ್ ಪ್ರತಿಕ್ರಿಯಿಸಿದ್ದಾರೆ.
ಹಣದುಬ್ಬರ ಕಡಿಮೆ ಇದ್ದರೂ ಬೆಲೆ ಏರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ಆಹಾರ ಸಚಿವರು ತಿಳಿಸಿದ್ದಾರೆ.
ಆಹಾರ ಸಚಿವ ಜಿ.ಆರ್.ಅನಿಲ್ ಅವರು ನಾಗರಿಕ ಸರಬರಾಜು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಕೃತಕವಾಗಿ ಬೆಲೆ ಏರಿಕೆ ಮಾಡಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ಕಂದಾಯ, ನಾಗರಿಕ ಸರಬರಾಜು, ಠಿoಲೀಸ್ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಗಳಿಗೆ ಜಂಟಿ ತನಿಖೆ ನಡೆಸುವಂತೆ ಸೂಚಿಸಲಾಗಿದೆ ಎಂದು ಸಚಿವ ಜಿ.ಆರ್.ಅನಿಲ್ ತಿಳಿಸಿದರು.