ಪೆರ್ಲ: ಪಡ್ರೆ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಅದ್ದೂರಿಯಾಗಿ ನಡೆಯಿತು. ಕುಮಾರಿ ಚಿತ್ರಲೇಖ ಅವರು ಯೋಗದ ಇತಿಹಾಸ, ಮಹತ್ವದ ಕುರಿತಾಗಿರುವ ಮಾಹಿತಿಗಳನ್ನು ನೀಡಿದರು. ಯೋಗವು ತರಬೇತಿ ಪಡೆದ ಜೀವನ ವಿಧಾನವಾಗಿದೆಯೆಂದೂ, ಯೋಗದ ಮೂಲಕ ಉನ್ನತ ಮಟ್ಟದ ಏಕಾಗ್ರತೆಯನ್ನು ಸಾಧಿಸಬಹುದೆಂದು ಶಾಲಾ ಮುಖ್ಯ ಶಿಕ್ಷಕರಾದ ಶ್ರೀ. ವಾಸುದೇವ ನಾಯಕ್ ಅಭಿಪ್ರಾಯ ಪಟ್ಟರು.
ನಿವೃತ್ತ ಅಧ್ಯಾಪಕ ಭಟ್ಯ ಪಾಟಾಳಿ ಮಕ್ಕಳಿಗೆ ಯೋಗದ ಕುರಿತು ತಿಳಿಹೇಳಿ, ಸರಳ ಯೋಗಾಭ್ಯಾಸಗಳ ಪ್ರತ್ಯಕ್ಷ ಅನುಭವವನ್ನು ನೀಡಿದರು. ಹಲವಾರು ಜೀವನಶೈಲಿ ರೋಗಗಳ ನಿವರಣೆ ಯೋಗಾಸನಗಳ ಕೈಯಲ್ಲಿದೆ ಎಂದು ಹೇಳಿದರು.
ಹಿರಿಯ ಶಿಕ್ಷಕಿ ಸರಸ್ವತಿ ಕೆ ಎನ್ ಸ್ವಾಗತಿಸಿ ಶಿಕ್ಷಕಿ ಮರಿಯಂಬಿ ವಂದಿಸಿದರು. ಶಿಕ್ಷಕ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.