ಕಾಸರಗೋಡು: ಮಧೂರು ಶ್ರೀಮದರು ಮಹಾಮಾತೆ ಮೊಗೇರ ಸಮಾಜದ ವತಿಯಿಂದ ಉಳಿಯತ್ತಡ್ಕ ಮೂಲಸ್ಥಾನದಲ್ಲಿ ಔಷಧೀಯ ಹಾಗೂ ಹೂವಿನ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷ ವಸಂತ ಅಜಕೋಡ್ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಂಘಟನೆ ಪೆÇೀಷಕ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಮಧೂರು ದೇವಸ್ಥಾನದ ಅಧಿಕಾರಿ ಬಿ. ಎನ್. ಸುಬ್ರಹ್ಮಣ್ಯ, ದೇವಸ್ಥಾನದ ಸದಸ್ಯ ಕೆ. ಶ್ಯಾಮ ಮಧ್ಯಸ್ಥ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಧೂರು ಶ್ರೀ ಮದನಂತೇಶ್ವರ ದೇವರ ಮೂಲಸ್ಥಾನ ಉಳಿಯತ್ತಕ್ಕದಲ್ಲಿ ಮದರು ಮಹಾ ಮಾತೆಯ ಮಂಟಪ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಇದರ ಆಸುಪಾಸು ಪುಷ್ಪ ಹಾಗೂ ಔಷಧೀಯ ಸಸ್ಯಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆನಂದ ಕೆ ಮವ್ವಾರ್, ಡಿ.ಕೃಷ್ಣದಾಸ್, ಸುಂದರ ಬಾರಡ್ಕ, ಪೆÇನ್ನಪ್ಪನ್ ಅಮ್ಮಂಗೋಡು, ರಾಮ ಪಟ್ಟಾಜೆ, ಪೂರ್ಣಿಮಾ ನೀರೋಳಿ, ಸುರೇಶ ಅಜಕ್ಕೋಡ್, ಸುಂದರ ಮಲಂಗೈ, ಡಿ.ಗೋಪಾಲ ಮವ್ವಾರ್, ಕೆ.ಐತಪ್ಪ, ಶಶಿ ಅಜಕ್ಕೋಡ್, ಸುಧಾಕರ ಬೆಳ್ಳಿಗೆ, ಜಯ ರಾಮಪ್ಪ ಡಿ.ಸುಂದರ ಉಪಸ್ಥಿತರಿದ್ದರು. ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಡಿ. ಶಂಕರ ಸ್ವಾಗತಿಸಿದರು.