ಕುಂಬಳೆ: ಕುಂಬಳೆ ಕುಂಟಂಗೇರಡ್ಕ ಜಿ.ಡಬ್ಲ್ಯೂ.ಎಲ್.ಪಿ.ಎಸ್ ಶಾಲಾ ಪ್ರವೇಶೋತ್ಸವ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಕವಿತಾ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಗ್ರಾ.ಪಂ. ಸದಸ್ಯ ವಿವೇಕಾನಂದ ಶೆಟ್ಟಿ ಶುಭ ಹಾರೈಸಿದರು. ಕಿಂಗ್ ಕೋಬ್ರಾ ಕ್ಲಬ್ಬಿನ ವತಿಯಿಂದ ಶಾಲೆಯ ಎಲ್ಲಾ ಮಕ್ಕಳಿಗೂ ನೋಟು ಪುಸ್ತಕ ಸೇರಿದಂತೆ ಕಲಿಕೋಪಕರಣಗಳನ್ನು ವಿತರಿಸಲಾಯಿತು. ಸತ್ಯಸಾಯಿ ಸಂಘದ ವತಿಯಿಂದ ಸಿಹಿ ತಿಂಡಿಗಳನ್ನು ಹಂಚಲಾಯಿತು. ಕುಂಬಳೆ ಎಸ್.ಎಫ್.ಐ. ಏರಿಯಾ ಸಮಿತಿ ಹಾಗೂ ಇಂಡಸ್ ಮೋಟಾರ್ ಮೊಗ್ರಾಲ್ ಕಲಿಕಾ ಕಿಟ್ ವಿತರಿಸಿದರು. ಸಭೆಯಲ್ಲಿ ಸೌಮ್ಯಲತ ಟೀಚರ್, ಮೈನ, ಲಲಿತ್ ಕುಮಾರ್, ಅನಿಲ್ ಕುಮಾರ್, ಭವ್ಯಶ್ರೀ ನವೀನ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಅಮ್ಮು ಮಾಸ್ತರ್ ಸ್ವಾಗತಿಸಿ, ಶಾಂತಿ ಟೀಚರ್ ವಂದಿಸಿದರು.