ಮಂಜೇಶ್ವರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಜೇಶ್ವರ ಯಸ್.ಎ.ಟಿ ಪ್ರೌಢ ಶಾಲೆಯ ಮುಖ್ಯೋಪಧ್ಯಾಯಿನಿ ಸುರೇಖಾ ಮಲ್ಯ ಅವರು ಗಿಡ ನೆಟ್ಟು ಚಾಲನೆ ನೀಡಿದರು. ಶಾಲಾ ಇಕೊಕ್ಲಬ್ ಸಂಚಾಲಕ ಜಯಪ್ರಕಾಶ್ ಶೆಟ್ಟಿ ನೇತೃತ್ವ ವಹಿಸಿ ಮಕ್ಕಳಿಗೆ ಗಿಡಗಳನ್ನು ನಡುವ ಬಗ್ಗೆ ತಿಳಿಸಿದರು. ಶಾರೀರಿಕ ಶಿಕ್ಷಕÀ ಶ್ಯಾಮಕೃಷ್ಣ ಪ್ರಕಾಶ್ ಮತ್ತು ವಸುಧಾಲಕ್ಷ್ಮಿ ಟೀಚರ್ ಉಪಸ್ಥಿತರಿದ್ದರು.