ತ್ರಿಶೂರ್: ಒಂದೇ ಕುಟುಂಬದ ಮೂವರು ಲಾಡ್ಜ್ ಕೊಠಡಿಯೊಳಗೆ ಶವವಾಗಿ ಪತ್ತೆಯಾಗಿರುವ ಘಟನೆ ಕೇರಳದ ತ್ರಿಶೂರ್ ನಲ್ಲಿ ನಡೆದಿದೆ.
ಘಟನೆಯು ಕೆಎಸ್ಆರ್ಟಿಸಿ ಬಸ್ ಡಿಪೋ ಬಳಿಯ ಲಾಡ್ಜ್‌ನಲ್ಲಿ ನಡೆದಿದ್ದು, ಚೆನ್ನೈ ಮೂಲದ ಸಂತೋಷ್ ಪೀಟರ್, ಸುನಿ ಪೀಟರ್ ಮತ್ತು ಅವರ ಮಗಳು (ಗುರುತು ಪತ್ತೆಯಾಗಿಲ್ಲ) ಮೃತಪಟ್ಟ ದುರ್ದೈವಿಗಳು. ಸ್ಥಳದಲ್ಲಿ ಡೆತ್ನೊಟ್ ಪತ್ತೆಯಾಗಿದ್ದು, ಹಣಕಾಸಿನ ಸಮಸ್ಯೆಯೇ ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 4ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಲಾಡ್ಜ್‌ನಲ್ಲಿ ಕೊಠಡಿ ತೆಗೆದುಕೊಂಡ ಕುಟುಂಬಸ್ಥರು, ಜೂನ್ 7ರ ರಾತ್ರಿ ಚೆಕ್ ಔಟ್ ಮಾಡುವುದಾಗಿ ಹೋಟೆಲ್ ಸಿಬ್ಬಂದಿಗೆ ಮೊದಲೇ ತಿಳಿಸಿದ್ದರು. ಆ ದಿನ ಲಾಡ್ಜ್ ಸಿಬ್ಬಂದಿ ಸಂತೋಷ್ಗೆ ಕರೆ ಮಾಡಲು ಪದೇ ಪದೇ ಪ್ರಯತ್ನಿಸಿದರೂ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಕೊನೆಗೆ ಲಾಡ್ಜ್ ಸಿಬ್ಬಂದಿ ರೂಮ್ ಬಳಿ ಹೋದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿದ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದು, ಇದು ಆತ್ಮಹತ್ಯೆ ಪ್ರಕರಣ ಎಂದು ತಿಳಿಸಿದ್ದಾರೆ.