ಮಧೂರು: ಗಂಡುಮೆಟ್ಟಿನ ಕಲೆ ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಯಕ್ಷ ಸಂಘಟನೆಗಳು ನಡೆಯಬೇಕು ಎಂದು ತೆಂಕುತಿಟ್ಟು ಹಿಮ್ಮೇಳದ ಗುರು, ಖ್ಯಾತ ಕಲಾವಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ತಿಳಿಸಿದ್ದರೆ. ಅವರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಸಿರಿಬಾಗಿಲಿನಲ್ಲಿ ನಡೆದ ಭಾಗವತಿಕೆ ಅದ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಿರಿಬಾಗಿಲು ಪ್ರತಿಷ್ಠಾನವು ಯಕ್ಷಗಾನ ಕ್ಷೇತ್ರದಲ್ಲಿ ಶ್ಲಾಘನೀಯ ಸೇವೆ ಸಲ್ಲಿಸುತ್ತಿದೆ. ಕಲೆಯ ವಿಸ್ತರಣೆ ಹಾಗೂ ಪೆÇೀಷಣೆಯ ದೃಷ್ಟಿಯಿಂದ ಪ್ರತಿಷ್ಠಾನದ ಧ್ಯೇಯೋದ್ದೇಶಗಳು ತುಂಬ ಪೂರಕವಾಗಿವೆ ಎಂದು ತಿಳಿಸಿದರು. ಶಿಬಿರದ ಆಶಯ ಮತ್ತು ಉದ್ದೇಶಗಳ ಕುರಿತು ಅರ್ಥಧಾರಿ, ಲೇಖಕ ರಾಧಾಕೃಷ್ಣ ಕಲ್ಚಾರ್ ಮಾತನಾಡಿದರು. ಪ್ರತಿಷ್ಠಾನದ ಆಧ್ಯಕ್ಷ ಸಿರಿಬಾಗಿಲು ರಾಮಕೃಷ್ಣ ಮಯ್ಯ ಸ್ವಾಗತಿಸಿದರು. ಶ್ರುತಕೀರ್ತಿ ರಾಜ ನಿರೂಪಿಸಿದರು.
ನಂತರ ನಡೆದ ಶಿಬಿರದಲ್ಲಿ ಕಂಠಸ್ವರವನ್ನು ಸಶಕ್ತಗೊಳಿಸುವ ಹಾಗೂ ವೃದ್ಧಿಸಿಕೊಳ್ಳುವ ವಿಧಾನದ ಬಗ್ಗೆ ಖ್ಯಾತ ಯೋಗಶಿಕ್ಷಕ ಪುಂಡರಿಕಾಕ್ಷ ಆಚಾರ್ಯ ಮಾಹಿತಿ ನೀಡಿದರು. ಕಂಠಸ್ವರದ ರಕ್ಷಣೆಗಾಗಿ ಯೋಗ, ಪ್ರಾಣಾಯಾಮಗಳ ಅಭ್ಯಾಸವನ್ನು ಅವರು ಪ್ರಾತ್ಯಕ್ಷಿಕೆಯ ಮೂಲಕ ನಡೆಸಿಕೊಟ್ಟರು. ಚೌಕಿ ಹಾಗೂ ರಂಗದಲ್ಲಿ ಭಾಗವತನ ಕರ್ತವ್ಯಗಳ ಕುರಿತು ಕ್ಯಾತ ಕಲಾವಿದ ಸುಬ್ರಾಯ ಹೊಳ್ಳ, 'ರಂಗಸ್ಥಳದಲ್ಲಿ ಮಾತು- ಗೀತ- ಮೌನ' ಎಂಬ ವಿಶಿಷ್ಟ ವಿಷಯದ ಕುರಿತು ಕಲಾವಿದ ಪ್ರಾಧ್ಯಾಪಕ ಪೃಥ್ವೀರಾಜ್ ಕವತ್ತಾರ್ ಕಾರ್ಯಕ್ರಮ ನಡೆಸಿಕೊಟ್ಟರು. ಭಾಗವತಿಕೆ ದೃಷ್ಟಿಯಿಂದ ಪೂರ್ವರಂಗದ ಮಾಹಿತಿಯನ್ನು ತಿಳಿಸಿದ ಭಾಗವತ ಪುತ್ತೂರು ರಮೇಶ್ ಭಟ್ ಅವರು ಪೂರ್ವರಂಗದ ಪದ್ಯಗಳ ಸಕ್ರಮ ಅಭ್ಯಾಸ ಅತ್ಯಗತ್ಯ ಎಂದು ತಿಳಿಸಿದರು. ಮಡಿಕೇರಿ ಆಕಾಶವಾಣಿಯ ಸುಬ್ರಾಯ ಸಂಪಾಜೆ ಅವರು ಭಾಗವತಿಕೆ ಮಾಡುವಾಗ ಧ್ವನಿವರ್ಧಕದ ಬಳಕೆ ಹೇಗಿರಬೇಕು ಎಂಬ ವಿಷಯದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು. ಕಾಲಮಿತಿ ಪ್ರಸಂಗದ ಗತಿಯನ್ನು ನಿರ್ಣಯಿಸುವುದು ಹೇಗೆ ಎಂಬ ಬಗ್ಗೆ ಪ್ರಾಧ್ಯಾಪಕ ಸುಣ್ಣಂಗುಳಿ ಶ್ರೀಕೃಷ್ಣ ಭಟ್ ವಿವರಿಸಿದರು. ಭಾಗವತರಾದ ರಾಜಾರಾಮ ಹೊಳ್ಳ ಕೈರಂಗಳ, ಅಂಡಾಲ ದೇವಿಪ್ರಸಾದ್ ಶೆಟ್ಟಿ, ದಿನೇಶ ಭಟ್ ಯಲ್ಲಾಪುರ ವಿವಿಧ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಮುರಾರಿ ಕಡಂಬಳಿತ್ತಾಯ, ನೆಕ್ಕರೆಮೂಲೆ ಗಣೇಶ ಭಟ್ ಮತ್ತು ಮುರಾರಿ ಪಂಜಿಗದ್ದೆ. ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಕಲಾವಿದ ಶಂಭಯ್ಯ ಕಂಜರ್ಪಣೆ, ಲಕ್ಷ್ಮಣ ಕುಮಾರ್ ಮರಕಡ, ಹರೀಶ್ ಬಳಂತಿಮೊಗರು, ವೈಕುಂಠ ಹೇರ್ಳೆ ಸಾಸ್ತಾನ ಉಪಸ್ಥಿತರಿದ್ದರು. ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಪುಸ್ತಕ ಹಾರವನ್ನು ನೀಡಲಾಯಿತು.