ಬದಿಯಡ್ಕ: ಕನ್ನೆಪ್ಪಾಡಿ ಆಶ್ರಯ ಆಶ್ರಮಕ್ಕೆ ಕಾಸರಗೋಡು ಚಿನ್ಮಯ ಮಿಶನ್‍ನ ಸ್ವಾಮಿ ಶ್ರೀವಿವಿಕ್ತಾನಂದ ಸರಸ್ವತಿ ಸ್ವಾಮೀಜಿಯವರು ಭೇಟಿ ನೀಡಿದರು. ಆಶ್ರಮದ ವತಿಯಿಂದ ಶ್ರೀಗಳನ್ನು ಪೂರ್ಣಕುಂಭಗಳೊಂದಿಗೆ ಸ್ವಾಗತಿಸಲಾಯಿತು. ಗೋವುಗಳಿಗೆ ಗೋಗ್ರಾಸವನ್ನು ನೀಡಿದ ಶ್ರೀಗಳು ನಡೆದ ಸಭಾಕಾರ್ಯಕ್ರಮದಲ್ಲಿ ಆಶೀರ್ವಚನವನ್ನು ನೀಡಿದರು. ಚಿನ್ಮಯ ಮಿಶನ್‍ನ ಅಧ್ಯಕ್ಷರು, ಸಿಬ್ಬಂದಿ ವರ್ಗ, ಅಧ್ಯಾಪಕರು, ಕಾರ್ಯದರ್ಶಿಗಳು ಜೊತೆಯಲ್ಲಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಚಾಲಕ ಗೋಪಾಲ ಚೆಟ್ಟಿಯಾರ್ ಉಪಸ್ಥಿತರಿದ್ದರು. ಆಶ್ರಮದ ಪ್ರಧಾನ ಕಾರ್ಯದರ್ಶಿ ಶಿವಶಂಕರ ಭಟ್ ಗುಣಾಜೆ ಸ್ವಾಗತಿಸಿ, ರಮೇಶ್ ಕಳೇರಿ ವಂದಿಸಿದರು.