ಕಾಸರಗೋಡು: ಕಟಪಾಡಿ ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರರಾದ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 19ನೇ ವರ್ಷದ ಶೋಭಕ್ಕøತ್ ಸಂವತ್ಸರದ ಚಾತುರ್ಮಾಸ ವ್ರತಾಚರಣೆಯು 2023 ಜುಲೈ 3 ರಿಂದ ಸೆಪ್ಟಂಬರ್ 29 ರ ವರೆಗೆ ಪಡು ಕುತ್ಯಾರಿನಲ್ಲಿ ನಡೆಯಲಿದೆ.
ವಷರ್ಂಪ್ರತಿ ನಡೆಯುವ ಚಾತುರ್ಮಾಸ ಪೂರ್ವಭಾವೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇಗುಲಗಳ ಕ್ಷೇತ್ರ ಸಂದರ್ಶನವು 2023 ಜೂನ್ 8 ರಿಂದ 29 ರವರೆಗೆ ನಡೆಯಲಿದೆ. 8ರಂದು ಅಂಕೋಲ, 10ರಂದು ಕೊಲಕಾಡಿ, ಪಣಂಬೂರು, ಹಳೆಯಂಗಡಿ, ಮಂಗಳೂರು, 11ರಂದು ಮಧೂರು, ಆರಿಕ್ಕಾಡಿ ಕಾರ್ಳೆ, ಬಂಗ್ರಮಂಜೇಶ್ವರ, ಕೋಟೆಕಾರು, 16ರಂದು ಕಾರ್ಕಳ, ಮೂಡಬಿದ್ರೆ, 18ರಂದು ಗೋಕರ್ಣ, ಭಟ್ಕಳ, 23ರಂದು ಬಾರ್ಕೂರು, ಉಪ್ರಳ್ಳಿ, 29ರಂದು ಕಟಪಾಡಿ, ಕಾಪು ದೇಗುಲಗಳ ಸಂದರ್ಶನ ನಡೆಯುವುದು ಎಂದು ಚಾತುರ್ಮಾಸ ವ್ರತ ನಿರ್ವಹಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಹೇಳಿಕೆಯಲ್ಲಿ ತಿಳಿಸಿದ್ದಾರೆ.