HEALTH TIPS

ಮಣಿಪುರ ಹಿಂಸಾಚಾರ| ಪ್ರಧಾನಿ ಮೌನವೇ ಉದಾಸೀನತೆಯ ಸಂದೇಶ: ವಿಪಕ್ಷಗಳ ವಾಗ್ದಾಳಿ

       ವದೆಹಲಿ: 'ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರ, ಜನರ ಸಾವು-ನೋವಿನಿಂದ ಮಣಿಪುರ ನಲುಗಿದೆ. ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿದ್ಯಮಾನಗಳ ಬಗ್ಗೆ ಪ್ರಧಾನಿ ಮಾತ್ರ 'ಅಸಡ್ಡೆಯಿಂದ ಕೂಡಿದ ಮೌನ' ತಾಳಿದ್ದಾರೆ.

         ಇದು ಮಣಿಪುರದ ಜನರ ಬಗ್ಗೆ ಮೋದಿ ಅವರಲ್ಲಿರುವ ಉದಾಸೀನತೆಯನ್ನು ಸ್ಪಷ್ಟವಾಗಿ ಹೇಳುತ್ತದೆ..'

- ಮಣಿಪುರ ವಿದ್ಯಮಾನಕ್ಕೆ ಸಂಬಂಧಿಸಿ 10 ವಿರೋಧ ಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡಿರುವ ಆರೋಪಗಳಿವು.

ಮಣಿಪುರದಲ್ಲಿನ ಹಿಂಸಾಚಾರ ಕುರಿತ ಮನವಿ ಪತ್ರವನ್ನು ವಿರೋಧ ಪಕ್ಷಗಳ ನಾಯಕರು ಮಂಗಳವಾರ ಬಿಡುಗಡೆ ಮಾಡಿದರು.

'ಮಣಿಪುರದಲ್ಲಿನ ಹಿಂಸಾಚಾರ ಕುರಿತ ಈ ಮನವಿಪತ್ರವನ್ನು ಅಮೆರಿಕ ಮತ್ತು ಈಜಿಪ್ಟ್‌ ಪ್ರವಾಸಕ್ಕೆ ತೆರಳುವ ಮುನ್ನವೇ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಲು ಮುಂದಾಗಿದ್ದೆವು. ಆದರೆ, ಪ್ರಧಾನಿಯ ಭೇಟಿಗೆ ಅವಕಾಶ ನೀಡದ ಕಾರಣ ಈ ಮನವಿಪತ್ರವನ್ನು ಬಿಡುಗಡೆ ಮಾಡಿದ್ದೇವೆ' ಎಂದು ಹೇಳಿದರು.

ಕಾಂಗ್ರೆಸ್‌, ಎಎಪಿ, ಟಿಎಂಸಿ, ಜೆಡಿಯು, ಸಿಪಿಎಂ, ಸಿಪಿಐ, ಶಿವಸೇನಾ (ಯುಬಿಟಿ), ಎನ್‌ಸಿಪಿ, ಆರ್‌ಎಸ್‌ಪಿ ಹಾಗೂ ಫಾರ್ವರ್ಡ್‌ ಬ್ಲಾಕ್‌ ನಾಯಕರು ಈ ಮನವಿಪತ್ರಕ್ಕೆ ಸಹಿ ಹಾಕಿದ್ದಾರೆ.

ನಂತರ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್‌ ನಾಯಕ ಹಾಗೂ ಮಣಿಪುರ ಮಾಜಿ ಮುಖ್ಯಮಂತ್ರಿ ಇಬೋಬಿ ಸಿಂಗ್‌, 'ಪ್ರಧಾನಿ ಅವರನ್ನು ಭೇಟಿ ಮಾಡುವುದಕ್ಕಾಗಿ ನಾವು ಜೂನ್‌ 10ರಿಂದ ಕಾಯುತ್ತಿದ್ದೆವು. ತಮ್ಮನ್ನು ಭೇಟಿ ಮಾಡಲು ಅವರು 10 ನಿಮಿಷ ಸಮಯ ಕೊಡಬಹುದು ಎಂಬ ನಿರೀಕ್ಷೆ ಹೊಂದಿದ್ದೆವು' ಎಂದು ಹೇಳಿದರು.

'ನಾವು ಸಣ್ಣ ರಾಜ್ಯಕ್ಕೆ ಸೇರಿದವರಾಗಿದ್ದು, ಏನೋ ಬೇಡಲು ಬಂದಿದ್ದಾರೆ ಎಂದು ಅವರು ಭಾವಿಸಿದ್ದಿರಬಹುದು. ಆದರೆ, ನಾವು ಭಿಕ್ಷುಕರಲ್ಲ. ಏನನ್ನೋ ಬೇಡುವುದಕ್ಕಾಗಿ ನಾವು ಇಲ್ಲಿಗೆ ಬಂದಿಲ್ಲ' ಎಂದು ಸಿಂಗ್‌ ಹೇಳಿದರು.

'ಮಣಿಪುರವನ್ನು ಭಾರತದ ಒಂದು ಭಾಗ ಎಂಬುದಾಗಿ ಅವರು ತಿಳಿದುಕೊಂಡಿದ್ದರೆ, ಆ ರಾಜ್ಯದಲ್ಲಿನ ಹಿಂಸಾಚಾರವನ್ನು ರಾಷ್ಟ್ರೀಯ ಸಮಸ್ಯೆ ಎಂಬುದಾಗಿ ಪರಿಗಣಿಸಬೇಕು' ಎಂದು ಆಗ್ರಹಿಸಿದರು.

'ಮೇ 3ರಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಹಿಂಸಾಚಾರ ತಡೆಗಟ್ಟುವಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಅಸಮರ್ಥ ಎಂಬುದನ್ನು ಇದು ತೋರಿಸುತ್ತದೆ. ಮಾಹಿತಿ ಕೊರತೆಯೇ ಹಿಂಸಾಚಾರಕ್ಕೆ ಕಾರಣ ಎಂಬುದನ್ನು ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ವಿಷಯವಾಗಿ ಮೋದಿ ನೇತೃತ್ವದ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು' ಎಂದು ಒತ್ತಾಯಿಸಿದರು.

ಮನವಿ ಪತ್ರದಲ್ಲಿನ ಪ್ರಮುಖ ಅಂಶಗಳು

* ಕುಕಿ ಬುಡಕಟ್ಟು ಸಮುದಾಯಕ್ಕೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಕಲ್ಪಿಸಬೇಕು ಎಂಬ 10 ಮಂದಿ ಕುಕಿ ಶಾಸಕರ ಬೇಡಿಕೆಗೆ ವಿರೋಧ

* ಮಣಿಪುರದ ಪ್ರತಿಯೊಂದು ಸಮುದಾಯದ ಅಹವಾಲು ಆಲಿಸಿ, ಪರಿಹಾರ ನೀಡಬೇಕು

* ತಕ್ಷಣವೇ ಎಲ್ಲ ಸಶಸ್ತ್ರ ಗುಂಪುಗಳು ಆಯುಧಗಳನ್ನು ತೊರೆಯುವಂತೆ ಕ್ರಮ ತೆಗೆದುಕೊಳ್ಳಬೇಕು

* ಈಗ ಘೋಷಿಸಿರುವ ₹ 101.75 ಕೋಟಿ ಮೊತ್ತದ ಪ್ಯಾಕೇಜ್‌ ಸಾಕಾಗುವುದಿಲ್ಲ. ಸಂತ್ರಸ್ತರ ಪುನರ್ವಸತಿ ಮತ್ತು ಜೀವನೋಪಾಯಕ್ಕಾಗಿ ಸೂಕ್ತ ಪ್ಯಾಕೇಜ್‌ ಘೋಷಿಸಬೇಕು

-ಇಬೋಬಿ ಸಿಂಗ್ ಮಣಿಪುರ ಮಾಜಿ ಮುಖ್ಯಮಂತ್ರಿಮಣಿಪುರದಲ್ಲಿನ ಹಿಂಸಾಚಾರಕ್ಕೆ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಅವರೇ ಕಾರಣ. ಮನಬಂದಂತೆ ತೆಗೆದುಕೊಂಡ ಕ್ರಮಗಳಿಂದಾಗಿ ರಾಜ್ಯವೇ ಹೊತ್ತಿ ಉರಿಯುತ್ತಿದೆ.

ಕುಕಿ ಸಮುದಾಯಕ್ಕೆ ರಕ್ಷಣೆ: ಅರ್ಜಿ ತುರ್ತು ವಿಚಾರಣೆಗೆ 'ಸುಪ್ರಿಂ' ನಕಾರ ನವದೆಹಲಿ(ಪಿಟಿಐ): ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಅಲ್ಪಸಂಖ್ಯಾತ ಕುಕಿ ಬುಡಕಟ್ಟು ಜನರಿಗೆ ಸೇನೆಯಿಂದ ರಕ್ಷಣೆ ಒದಗಿಸಬೇಕು ಎಂದು ಕೋರಿದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ಮಂಗಳವಾರ ನಿರಾಕರಿಸಿತು. 'ಇದು ಕಾನೂನು-ಸುವ್ಯವಸ್ಥೆಗೆ ಸಂಬಂಧಿಸಿದ ಗಂಭೀರ ವಿಷಯ. ಇದನ್ನು ಅಲ್ಲಿನ ಆಡಳಿತವೇ ನಿಭಾಯಿಸಬೇಕು' ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಎಂ.ಎಂ.ಸುಂದ್ರೇಶ್‌ ಅವರಿದ್ದ ರಜಾಕಾಲದ ನ್ಯಾಯಪೀಠ ಹೇಳಿತು. 'ಈ ವಿಷಯದಲ್ಲಿ ನ್ಯಾಯಾಲಯದ ಹಸ್ತಕ್ಷೇಪ ಮಣಿಪುರದಲ್ಲಿ ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ' ಎಂದ ನ್ಯಾಯಪೀಠ ವಿಚಾರಣೆಯನ್ನು ಜುಲೈ 3ಕ್ಕೆ ಮುಂದೂಡಿತು. 'ಮಣಿಪುರ ಬುಡಕಟ್ಟು ವೇದಿಕೆ' ಎಂಬ ಎನ್‌ಜಿಒ ಈ ಅರ್ಜಿಯನ್ನು ಸಲ್ಲಿಸಿತ್ತು.

ದಿನದ ಬೆಳವಣಿಗೆಗಳು * ನಿಷೇಧಿತ ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್‌ (ಯುಎನ್‌ಎಲ್‌ಎಫ್‌)ಗೆ ಸೇರಿದ ನಾಲ್ವರು ಶಂಕಿತ ಬಂಡುಕೋರರನ್ನು ಥೌಬಲ್‌ ಜಿಲ್ಲೆಯಲ್ಲಿ ಬಂಧಿಸಿ ಫಿರಂಗಿ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆ ಹೇಳಿದೆ * ಹಿಂಸಾಚಾರ ಹಿನ್ನೆಲೆಯಲ್ಲಿ ಇಂಫಾಲ್‌ನಲ್ಲಿ ಮಂಗಳವಾರ ನಡೆಯಬೇಕಿದ್ದ ಜಗನ್ನಾಥ ದೇವರು ದೇವಿ ಸುಭದ್ರ ಹಾಘೂ ಬಲಭದ್ರ ದೇವರ ವಾರ್ಷಿಕ ರಥಯಾತ್ರೆಯನ್ನು ರದ್ದುಪಡಿಸಿದ್ದಾಗಿ ಬ್ರಹ್ಮ ಸಭಾ ಮುಖಂಡ ನವಕುಮಾರ್ ಶರ್ಮ ತಿಳಿಸಿದ್ದಾರೆ. 1780ರಲ್ಲಿ ಮಹಾರಾಜ ಭಾಗ್ಯಚಂದ್ರ ಅರಮನೆಯಲ್ಲಿ ಈ ರಥಯಾತ್ರೆಗೆ ಚಾಲನೆ ನೀಡಿದ್ದ. 1832ರಿಂದ ಸಾರ್ವಜನಿಕವಾಗಿ ಈ ಉತ್ಸವವನ್ನು ಆಚರಿಸಲಾಗುತ್ತಿದೆ. * ಮಣಿಪುರದಲ್ಲಿನ ಹಿಂಸಾಚಾರ ಕುರಿತು ನಾಗಾಲ್ಯಾಂಡ್‌ ಮುಖ್ಯಮಂತ್ರಿ ನೇಪಿಯು ರಿಯೊ ಕಳವಳ ವ್ಯಕ್ತಪಡಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries