ಕಾಸರಗೋಡು: 2017ರಲ್ಲಿ ವೈದ್ಯಕೀಯ ಶಿಬಿರದಲ್ಲಿ ಪತ್ತೆಹಚ್ಚಲಾದ 1031 ಸಂತ್ರಸ್ತರನ್ನು ಪಟ್ಟಯಿಂದ ಹೊರಗಿಟ್ಟಿರುವ ಸಂತ್ರಸ್ತರಿಗೆ ಸವಲತ್ತು ಒದಗಿಸುವಂತೆ ಒತ್ತಾಯಿಸುವ ಮುಷ್ಕರ ಬಲಪಡಿಸಲು ಮುಷ್ಕರ ಸಮಿತಿ ನಿರ್ಧರಿಸಿದೆ.
ಜೂ.30 ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ಮುಷ್ಕರ ಘೋಷಣೆ ನಡೆಯಲಿದೆ. ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸೇರಿದಂತೆ ತೀವ್ರ ಆಂದೋಲನ ನಡೆಸಬೇಕಾಗಿಬರಲಿದೆ. 1031ಮಂದಿಯನ್ನೊಳಗೊಂಡ ಪಟ್ಟಿ ತಿರಸ್ಕಾರಕ್ಕೆ ಕಾರಣ ಸ್ಪಷ್ಟಪಡಿಸುವಂತೆ ಕೇಳಲಾಗಿದ್ದರೂ, ಈ ಬಗ್ಗೆ ಉತ್ತರ ಲಭಿಸಿಲ್ಲ. ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರು ಕೂಡಲೇ ಈ ಬಗ್ಗೆ ಮಧ್ಯಪ್ರವೇಶಿಸುವಂತೆ ಒತ್ತಾಯಿಸಲಾಗುವುದು. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಅರ್ಹರನ್ನು ಪಟ್ಟಿಯಿಂದ ಹೊರಗಿರಿಸಲಾಗಿದೆ ಎಂಬುದಗಿ ಸಭೆಯಲ್ಲಿ ಅಭಿಪ್ರಾಯಪಡಲಾಯಿತು. ಎಂ.ಕೆ. ಅಜಿತಾ ಅಧ್ಯಕ್ಷತೆ ವಹಿಸಿದ್ದರು.
ಡಾ. ಡಿ. ಸುರೇಂದ್ರನಾಥ್, ಅಂಬಲತ್ತರ ಕುಞÂಕೃಷ್ಣನ್, ಕಮಲಾ ಬಾಯಾರ್, ಸುಬೈರ್ ಪಡ್ಪು, ತಾಜುದ್ದೀನ್ ಪಿಂಜಾರ್, ತಂಬಾನ್, ಜೈನ್. ಪಿ.ವರ್ಗೀಸ್, ಫೈರುಜಾ ಪಳ್ಳಿಕ್ಕರ, ಅಬ್ದುಲ್ ರಹಮಾನ್ ಉಪಸ್ಥಿತರಿದ್ದರು. ಪಿ.ಶೈನಿ ಸ್ವಾಗತಿಸಿದರು. ರಾಧಾಕೃಷ್ಣನ್ ಅಂಜಾವಯಲ್ ವಂದಿಸಿದರು.