ತಿರುವನಂತಪುರಂ: ಬಳಸಿ ಬಿಸಾಡುವ ಸಂಘಟನೆ ಎಸ್.ಎಫ್.ಐ ಅಲ್ಲ ಎಂದು ಪಿಎಂ ಅರ್ಶೋ ಹೇಳಿದ್ದಾರೆ. ತಾನು ಪರೀಕ್ಷೆ ಬರೆಯದೇ ಉತ್ತೀರ್ಣಗೊಂಡವ ಎಂದು ಮಾಧ್ಯಮಗಳು ಬಿಂಬಿಸಲು ಯತ್ನಿಸುತ್ತಿವೆ ಎಂದವರು ಟೀಕಿಸಿರುವರು.
ತನ್ನ ವಿರುದ್ಧ ಮಾಡಿರುವ ಆರೋಪ ಸುಳ್ಳು. ಪರೀಕ್ಷಾ ಶುಲ್ಕ ಪಾವತಿಸುವಲ್ಲಿ ಮಾತ್ರ ತಪ್ಪಾಗಿದೆ ಎಂದು ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ ಆರ್ಶೋ ಸಮರ್ಥಿಸಿಕೊಂಡರು.
ಎಸ್‍ಎಫ್‍ಐ ಬಗ್ಗೆ ಸುಳ್ಳು ಸುದ್ದಿ ನೀಡುವುದನ್ನು ನಿಲ್ಲಿಸಬೇಕು. ನೀವು ನಮ್ಮ ನ್ಯೂನತೆಗಳನ್ನು ಸೂಚಿಸಬಹುದು. ಎಸ್.ಎಫ್.ಐ ಟೀಕೆಗಳನ್ನು ಸ್ವಾಗತಿಸುತ್ತದೆ. ಯಾವಾಗಲೂ ಟೀಕೆಗಳನ್ನು ಸ್ವೀಕರಿಸಲು ಸಿದ್ಧವಾಗಿದೆ. ಇದು ಮೂರನೇ ಸೆಮಿಸ್ಟರ್ ಪರೀಕ್ಷೆಯ ಶುಲ್ಕವನ್ನು ಎರಡನೇ ಬಾರಿಗೆ ಮರು ಪಾವತಿಯ ಭಾಗವಾಗಿ ಮಾಡಿದ ತಪ್ಪಾಗಿದೆ. ಪ್ರಾಂಶುಪಾಲರು ಹಲವಾರು ಬಾರಿ ವಿಷಯಗಳನ್ನು ಬದಲಾಯಿಸಿದ್ದಾರೆ. ಆದರೆ ಎಸ್‍ಎಫ್‍ಐ ಆರಂಭದಲ್ಲಿ ಹೇಳುವುದು ಒಂದೇ ಮಾತು ಎಂದು ಆರ್ಶೋ ತಿಳಿಸಿದ್ದಾರೆ.
ವಿವಾದದ ಹಿಂದೆ ದೊಡ್ಡ ಷಡ್ಯಂತ್ರವಿದೆ. ಈ ಬಗ್ಗೆ ತೀವ್ರ ತನಿಖೆಯಾಗಬೇಕು. ಪೊಲೀಸ್ ಹಾಗೂ ಉನ್ನತ ಶಿಕ್ಷಣ ಇಲಾಖೆಗೆ ದೂರು ನೀಡಲಾಗುವುದು. ಮಾಧ್ಯಮಗಳು ಕೊಡುವುದೆಲ್ಲವೂ ಸುಳ್ಳು ಸುದ್ದಿ. ನಾನು ಪರೀಕ್ಷೆ ಬರೆಯದೇ ಪಾಸಾಗಿದ್ದೇನೆ ಎಂದು ಮಾಧ್ಯಮಗಳು ಬಿಂಬಿಸಲು ಯತ್ನಿಸಿದವು. ನಾನು ನಕಲಿ ಪ್ರಮಾಣಪತ್ರ ತಯಾರಕ ಎಂದು ಸ್ಥಾಪಿಸಲು ಪ್ರಯತ್ನಿಸಲಾಗಿದೆ. ಕ್ಯಾಂಪಸ್‍ನಲ್ಲಿ ನಡೆದಿರುವ ಷಡ್ಯಂತ್ರಗಳ ಬಗ್ಗೆ ತನಿಖೆಯಾಗಬೇಕು. ಎಸ್‍ಎಫ್‍ಐ ಮುಖಂಡರನ್ನು ಕೆಟ್ಟದಾಗಿ ಬಿಂಬಿಸುವ ಮೂಲಕ ಬೇಟೆಯಾಡಲಾಗುತ್ತಿದೆ ಎಂದು ಪಿ.ಎಂ.ಅÀರ್ಶೋ ಹೇಳಿದರು.