ಪೆರ್ಲ: ಕ್ಷೀರ ಅಭಿವೃದ್ಧಿ ಇಲಾಖೆ ಮತ್ತು ಪಡ್ರೆ ಕ್ಷೀರೋತ್ಪಾದಕ ಸಹಕರಣ ಸಂಘದ ಸಹಕಾರದೊಂದಿಗೆ ಹಾಲುತ್ಪಾದಕರ ಸಂಪರ್ಕ ಸಭೆ ಕುತ್ತಾಜೆ ಕಮ್ಯೂನಿಟಿ ಹಾಲ್ ನಲ್ಲಿ ನಡೆಯಿತು. ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯÀ ಎಸ್.ಬಿ ನರಸಿಂಹ ಪೂಜಾರಿಯವರು ಸಮಾರಂಭವನ್ನು ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಪಡ್ರೆ ಕ್ಷೀರೋತ್ಪಾದಕ ಸಹಕರಣ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಎನ್ ವಹಿಸಿದ್ದರು. ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯ ರಾಮಚಂದ್ರ ಎಂ ಉಪಸ್ಥಿತರಿದ್ದರು. ಮಂಜೇಶ್ವರ ಕ್ಷೀರ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ಅಜಯನ್ "ಹಾಲುತ್ಪಾದನೆಯಲ್ಲಿ ಸ್ವಾವಲಂಬನೆ -ಸವಲತ್ತುಗಳು" ಎಂಬ ವಿಷಯದ ಬಗ್ಗೆ ತರಗತಿಯನ್ನು ನಡೆಸಿದರು.ಸಂಘದ ಕಾರ್ಯದರ್ಶಿ ರವಿ ಸ್ವಾಗತಿಸಿ, ನಿರ್ದೇಶಕ ದಯಾನಂದ ರೈ ವಂದಿಸಿದರು.