ಬದಿಯಡ್ಕ: ನೀರ್ಚಾಲು ಸಮೀಪದ ಚುಕ್ಕಿನಡ್ಕ ಅರುಣೋದಯ ಫ್ರೆಂಡ್ಸ್ ಕ್ಲಬ್‍ನ ಉದ್ಘಾಟನಾ ಸಮಾರಂಭ ಪಟ್ಟಾಜೆ ಅಂಗನವಾಡಿ ಪರಿಸರದಲ್ಲಿ ನಡೆಯಿತು.
ಗ್ರಾಮಪಂಚಾಯತಿ ವಾರ್ಡು ಪ್ರತಿನಿಧಿ ಶ್ಯಾಮಪ್ರಸಾದ ಮಾನ್ಯ ಉದ್ಘಾಟಿಸಿದರು. ಕ್ಲಬ್‍ನ ಅಧ್ಯಕ್ಷ ಆನಂದ ನಾಯ್ಕ್ ಚುಕ್ಕಿನಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಲೋಹಿತಾಕ್ಷನ್ ನಾಯರ್ ಪಟ್ಟಾಜೆ ಅತಿಥಿಯಾಗಿ ಪಾಲ್ಗೊಂಡಿದ್ದರು. ಪೊಲೀಸ್ ಇಲಾಖೆಯ ಸಿಬ್ಬಂದಿ ಅನೂಪ್ ಶುಭಾಶಂಸನೆಗೈದರು. ಕೃಷ್ಣ ನಾಯ್ಕ ಚುಕ್ಕಿನಡ್ಕ, ಕಾರ್ಯದರ್ಶಿ ಬಾಲಕೃಷ್ಣ ಚುಕ್ಕಿನಡ್ಕ ಉಪಸ್ಥಿತರಿದ್ದರು. ಚಿತ್ರಕಲಾ ಸ್ವಾಗತಿಸಿ, ಕ್ಲಬ್ಬಿನ ಸದಸ್ಯ ಶಂಕರ ಮಾಡತ್ತಡ್ಕ ವಂದಿಸಿದರು. ಇದೇ ಸಂದಭರ್Àದಲ್ಲಿ ಪಟ್ಟಾಜೆ ಅಂಗನವಾಡಿಯ ಮಕ್ಕಳಿಗೆ ಕಲಿಕೋಪಕರಣಗಳನ್ನು ವಿತರಿಸಲಾಯಿತು.