ತಿರುವನಂತಪುರ: ರಾಜ್ಯದಲ್ಲಿ ಇನ್ನು ಮುಂದೆ ಎಲ್ಲರಿಗೂ ಉಚಿತ ರೇಬಿಸ್ ಲಸಿಕೆ ಲಭ್ಯವಿರದು.
ಇನ್ನು ಮುಂದೆ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಉಚಿತ ಲಸಿಕೆ ಲಭ್ಯವಾಗಲಿದೆ. ಆರೋಗ್ಯ ಇಲಾಖೆ ಈ ಹೊಸ ನಿರ್ಧಾರ ಪ್ರಕಟಿಸಿದೆ.
ಈ ನಡುವೆ ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಕಣ್ಣೂರಿನ ಪಾನೂರಿನಲ್ಲಿ ಒಂದೂವರೆ ವರ್ಷದ ಬಾಲಕನೊಬ್ಬ ಬೀದಿ ನಾಯಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ. ಮೊನ್ನೆ ತ್ರಿಶೂರ್‍ನಲ್ಲೂ ಬೀದಿ ನಾಯಿಗಳ ದಾಳಿ ನಡೆದಿತ್ತು. ಈ ಸಮಸ್ಯೆಗಳ ಮಧ್ಯೆ ಸರ್ಕಾರ ಹೊಸ ನಿರ್ಧಾರ ಪ್ರಕಟಿಸಿದೆ.