ಮಂಜೇಶ್ವರ: ಗಡಿನಾಡಿನ ಖ್ಯಾತ ಸಾಮಾಜಿಕ ಹಾಗೂ ಸಾಂಸ್ಕøತಿಕ ಸಂಘಟನೆ ರಂಗ ಚಿನ್ನಾರಿ ಕಾಸರಗೋಡು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಜೂನ್ 24 ರಿಂದ ಜೂನ್ 30ರವರೆಗೆ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಕಾಸರಗೋಡು ಕನ್ನಡ ಹಬ್ಬ ಸಪ್ತಾಹದ ಎರಡನೇ ಕಾರ್ಯಕ್ರಮ ಖ್ಯಾತ ಗಾಯಕ ಮುಲ್ಕಿ ರವೀಂದ್ರ ಪ್ರಭು ಹಾಗೂ ಸಂಗಡಿಗರ ಭಕ್ತಿ, ಭಾವ, ಜನಪದಗೀತೆಗಳ “ಕನ್ನಡ ಡಿಂಡಿಮ” ವರ್ಕಾಡಿ ಶ್ರೀ ಕಾವಿ ಸುಬ್ರಹ್ಮಣ್ಯ ದೇವಸ್ಥಾನ ಸಭಾಂಗಣದಲ್ಲಿ ಜರಗಿತು.
ಕಾವಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಮಂಡಳಿ ಪ್ರಾಯೋಜಿಸಿದ ಕಾರ್ಯಕ್ರಮವನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಸುಭಾಷ್ ಚಂದ್ರ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಭಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವರ್ಕಾಡಿ ಚರ್ಚ್‍ನ ಗುರು ರೆ.ಪಾ. ಬಾಸಿಲ್‍ವಾಜ್ ಮಾತನಾಡಿ, ರಂಗ ಚಿನ್ನಾರಿ ಸಂಸ್ಥೆ ಹಾಗೂ ಸಂಸ್ಥೆಯ ರೂವಾರಿ ಕಾಸರಗೋಡು ಚಿನ್ನಾ ಕಳೆದÉರಡು ದಶಕಗಳಿಂದ ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕøತಿಯನ್ನು ಉಳಿಸುವಲ್ಲಿ ಮಹತ್ತರ ಕೊಡುಗೆ ನೀಡುತ್ತಿರುವುದು ಸ್ತುತ್ಯರ್ಹ. ಕರ್ನಾಟಕ ಸರ್ಕಾರ ಉತ್ತಮವಾಗಿ ಸಹಕಾರ ನೀಡುತ್ತಿರುವುದು ಸಂತಸದ ವಿಚಾರ. ಇನ್ನಷ್ಟು ಕನ್ನಡದ ಕಾರ್ಯಗಳು ಕನ್ನಡದ ಮನಸ್ಸುಗಳನ್ನು ಬೆಸೆಯುತ್ತಾ ರಂಗ ಚಿನ್ನಾರಿ ಮುನ್ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಯಕ್ರಮ ಸಂಯೋಜಕ, ರಂಗಚಿನ್ನಾರಿ ಸಂಚಾಲಕ ಕಾಸರಗೋಡು ಚಿನ್ನಾ ಕಾಸರಗೋಡು ಕನ್ನಡಹಬ್ಬದ ಹಾಗೂ ರಂಗ ಚಿನ್ನಾರಿಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ಲೇಖಕ ಯೋಗೀಶ ರಾವ್ ಚಿಗುರುಪಾದೆ, ಸಾವಿತ್ರಿ ಹೊಳ್ಳ ಅತಿಥಿಗಳಾಗಿ ಭಾಗವಹಿಸಿದ್ದರು. ವರ್ಕಾಡಿಗೆ ಕೀರ್ತಿತಂದ ಪ್ರತಿಭೆಗಳಾದ ನಾಟ್ಯ ತರಬೇತಿ ಗುರು ಸುಷ್ಮಾ ವರ್ಕಾಡಿ, ಯಕ್ಷಗಾನ ತಾಳಮದ್ದಳೆ ತರಬೇತಿ ಗುರು ಸರಸ್ವತಿ ಹೊಳ್ಳ ಅವರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು. ಸೀತಾರಾಂ ಬೇರಿಂಜ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ನಡೆದ ‘ಕನ್ನಡ ಡಿಂಡಿಮ’ ಪ್ರಸ್ತುತಿಯಲ್ಲಿ ನಾಡಿನ ಖ್ಯಾತ ಗಾಯಕರಾದ ಮುಲ್ಕಿ ರವೀಂದ್ರ ಪ್ರಭು, ಕಿಶೋರ್ ಪೆರ್ಲ ಹಾಗೂ ಗಾಯಕಿ ಅಕ್ಷತಾ ವರ್ಕಾಡಿ ಕನ್ನಡ ಭಕ್ತಿ, ಭಾವ, ಜನಪದಗೀತೆಗಳ ಹಾಡುಗಳನ್ನು ಹಾಡಿ ಸೇರಿದ ಜನಸ್ತೋಮವನ್ನು ರಂಜಿಸಿದರು. ಕನ್ನಡ ಹಬ್ಬದ ಎಲ್ಲಾ ಕಲಾವಿದರಿಗೆ ಹಾಗೂ ಅತಿಥಿಗಳಿಗೆ ಕನ್ನಡ ಹಬ್ಬದ ಸ್ಮರಣಿಕೆಯನ್ನು ನೀಡಿ ರಂಗ ಚಿನ್ನಾರಿವತಿಯಿಂದ ಗೌರವಿಸಲಾಯಿತು.