ಕಾಸರಗೋಡು: ಜಿಲ್ಲಾ ಸಾಮಾಜಿಕ ನ್ಯಾಯ ಕಛೇರಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಸ್ಟೂಡೆಂಟ್ ಪೆÇಲೀಸ್ ಕೆಡೆಟ್ ವತಿಯಿಂದ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯದ ವಿರುದ್ಧ ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮ ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಇಭಾಶೇಖರ್ ಸಮಾರಂಭ ಉದ್ಘಾಟಿಸಿದರು. ಹಿರಿಯರ ಮೇಲಿನ ದೌರ್ಜನ್ಯದ ವಿರುದ್ಧ ಜಿಲ್ಲಾಧಿಕಾರಿ ಪ್ರತಿಜ್ಞೆ ಬೋಧಿಸಿದರು. ಕಾಸರಗೋಡು ನಗರಸಭೆ ಅಧ್ಯಕ್ಷ ವಕೀಲ ವಿ.ಎಂ.ಮುನೀರ್ ಅಧ್ಯಕ್ಷತೆ ವಹಿಸಿದ್ದರು. ಉಪ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಆರ್.ವಂದನಾ ಸಂದೇಶ ನೀಡಿದರು. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಸುರೇಂದ್ರನ್ ಪೆÇೀಸ್ಟರ್ ಬಿಡುಗಡೆ ಮಾಡಿದರು. ಜಿಲ್ಲಾ ಹಿರಿಯರ ಪರಿಷತ್ ಸದಸ್ಯರು ಭಿತ್ತಿಪತ್ರ ಸ್ವೀಕರಿಸಿದರು. ನಾರ್ಕೋಟಿಕ್ಸ್ ಸೆಲ್ ಡಿವೈಎಸ್ಪಿ ಮತ್ತು ಎಸ್ಪಿಸಿ ಜಿಲ್ಲಾ ನೋಡಲ್ ಅಧಿಕಾರಿ ಎಂ.ಎ.ಮ್ಯಾಥ್ಯೂ ಹಿರಿಯರ ಪರಿಷತ್ ಸದಸ್ಯರನ್ನು ಸನ್ಮಾನಿಸಿದರು. ಜಿಲ್ಲಾ ಹಿರಿಯರ ಪರಿಷತ್ ಸದಸ್ಯರಾದ ಪುತ್ತೂರು ಕಣ್ಣನ್ ಮಾಸ್ಟರ್, ಪಿ.ವಿ.ಕೃಷ್ಣನ್ ನಾಯರ್, ಎ.ನಾರಾಯಣನ್ ಮಾಸ್ಟರ್, ಟಿ.ಕೆ.ಬಾಲಕೃಷ್ಣನ್, ಇ.ಲಕ್ಷ್ಮಿ ಹಾಗೂ ಬಾಲನ್ ಒಲಿಯಕಲ್ ಅವರನ್ನು ಸನ್ಮಾನಿಸಲಾಯಿತು. ಕಾಸರಗೋಡು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ಬಾಸ್ ಬೇಗಂ, ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್, ಜಿಲ್ಲಾ ಪರೀಕ್ಷಾಧಿಕಾರಿ ಪಿ. ಬಿಜು ಮುಂತಾದವರು ಉಪಸ್ಥಿತರಿದ್ದರು.
ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದ ಬೀದಿನಾಟಕಕ್ಕೆ ಜಿಲ್ಲಾ ಆಸ್ಪತ್ರೆ ವಠಾರದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಹಾಗೂ ಕಾಸರಗೋಡು ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಕಾಸರಗೋಡು ಆರ್‍ಡಿಒ ಅತುಲ್ ಎಸ್ ನಾಥ್ ಧ್ವಜತೋರಿಸಿ ಚಾಲನೆ ನೀಡಿದರು.