ನವದೆಹಲಿ: ವಿದೇಶಕ್ಕೆ ಪ್ರಯಾಣಿಸುವುದು ಪ್ರತಿಯೊಬ್ಬರ ಮೌಲ್ಯಯುತ ಮೂಲಭೂತ ಹಕ್ಕಾಗಿದೆ ಎಂದು ಪ್ರತಿಪಾದಿಸಿರುವ ದೆಹಲಿ ನ್ಯಾಯಾಲಯವು, ಕೆಲವು ಅಸಾಧಾರಣ ಪ್ರಕರಣಗಳಲ್ಲಿ ಮಾತ್ರವೇ ಇದನ್ನು ಮೊಟಕುಗೊಳಿಸಬಹುದು ಎಂದು ಅಭಿಪ್ರಾಯಪಟ್ಟಿದೆ.
ನವದೆಹಲಿ: ವಿದೇಶಕ್ಕೆ ಪ್ರಯಾಣಿಸುವುದು ಪ್ರತಿಯೊಬ್ಬರ ಮೌಲ್ಯಯುತ ಮೂಲಭೂತ ಹಕ್ಕಾಗಿದೆ ಎಂದು ಪ್ರತಿಪಾದಿಸಿರುವ ದೆಹಲಿ ನ್ಯಾಯಾಲಯವು, ಕೆಲವು ಅಸಾಧಾರಣ ಪ್ರಕರಣಗಳಲ್ಲಿ ಮಾತ್ರವೇ ಇದನ್ನು ಮೊಟಕುಗೊಳಿಸಬಹುದು ಎಂದು ಅಭಿಪ್ರಾಯಪಟ್ಟಿದೆ.
₹ 135 ಕೋಟಿ ಬ್ಯಾಂಕ್ ಸಾಲ ವಂಚನೆ ಪ್ರಕರಣದ ಆರೋಪ ಹೊತ್ತ ರಾಮನ್ ಸೇಥಿ ಎಂಬುವರು ಅಮೆರಿಕದಲ್ಲಿರುವ ತಮ್ಮ ಪುತ್ರನ ಪದವಿ ಪ್ರದಾನ ಸಮಾರಂಭಕ್ಕೆ ತೆರಳಲು ಮುಂದಾಗಿದ್ದರು. ಇದಕ್ಕೆ ಸಿಬಿಐ ಅನುಮತಿ ನೀಡಲು ಆಕ್ಷೇಪಿಸಿತ್ತು. ಇದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಅನಿಲ್ ಅಂಥಿಲ್ ಅವರು, 'ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿದೆ. ಯಾವುದೇ ವ್ಯಕ್ತಿಯ ಸಂತಸಕ್ಕೆ ಅಡ್ಡಿಪಡಿಸುವ ಅಧಿಕಾರ ಕಾನೂನಿನಡಿ ಇಲ್ಲ. ಮೇ ತಿಂಗಳಿನಲ್ಲಿ ಯುಎಇಗೆ ತೆರಳಿದ್ದ ಅರ್ಜಿದಾರರು ವಾಪಸ್ ಮರಳಿದ್ದಾರೆ' ಎಂಬುದನ್ನು ಉಲ್ಲೇಖಿಸಿ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಿತು.