ಕಾಸರಗೋಡು: ಬಿರುಸಿನ ಮಳೆಗೆ ಕಾಸರಗೋಡು ನೆಲ್ಲಿಕುಂಜೆಯ ಬಂಗರಕುನ್ನು ನಿವಾಸಿ ದಿ. ಬೀಫಾತಿಮ್ಮೆ ಎಂಬವರ ಮನೆ ಎದುರಿನ ಬಾವಿ ಕುಸಿದು ಬಿದ್ದಿದೆ. ಬಾವಿಗೆ ಅಳವಡಿಸಿದ್ದ ಮೊಟಾರೂ ನೀರಿನೊಳಗಾಗಿದೆ. ಬಾವಿ ಆವರಣಗೋಡೆಯ ಒಂದು ಪಾಶ್ರ್ವ ಮಾತ್ರ ಉಳಿದುಕೊಂಡಿದ್ದು, ಬಾಕಿ ಭಾಗ ಕುಸಿದು ಬಿದ್ದಿದೆ. ಈ ಕುಟುಂಬ ಕುಡಿಯಲು ಇದೇ ಬಾವಿಯ ನೀರು ಉಪಯೋಗಿಸುತ್ತಿದ್ದು, ಕುಡಿಯುವ ನೀರಿಗೆ ತತ್ವಾರವೆನಿಸಿದೆ.
ಉಪ್ಪಳದಲ್ಲೂ ಬಾವಿ ಕುಸಿತ:
ಮಂಗಳವಾರ ಸುರಿದ ಬಿರುಸಿನ ಮಳೆಗೆ ಉಪ್ಪಳ ಚೆರುಗೋಳಿ ನಿವಾಸಿ ಐತ್ತಪ್ಪ ಪೂಜಾರಿ ಎಂಬವರ ಮನೆ ಸನಿಹದ ತೆರೆದ ಬಾವಿ ಕುಸಿದು, ಬಾವಿಗೆ ಅಳವಡಿಸಿದ್ದ ವಿದ್ಯುತ್ ಮೋಟಾರು ನೀರಿನೊಳಗೆ ಸೇರಿಕೊಂಡಿದೆ. ಘಟನ ಸ್ಥಳಕ್ಕೆ ಗ್ರಮ ಪಂಚಾಯಿತಿ ಸದಸ್ಯೆ ರೇವತಿ, ಮಾಜಿಸ ದಸ್ಯ ಬಾಲಕೃಷ್ಣ ಮುಂತಾದವರು ಭೇಟಿ ನೀಡಿದರು.
ಕಾಸರಗೋಡು ಬಂಗರಕುನ್ನು ನಿವಾಸಿ ದಿ. ಬೀಫಾತಿಮ್ಮ ಅವರ ಮನೆ ಎದುರಿನ ಬಾವಿ ಕುಸಿದು ಹಾನಿಗೀಡಾಗಿದೆ.