ತಿರುವನಂತಪುರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ತಿರುವನಂತಪುರಂಗೆ ಇಂದು ಬೆಳಿಗ್ಗೆ ಆಗಮಿಸಿದರು. ಪ್ರಕಾಶ್ ಜಾವಡೇಕರ್, ಕೆ.ಸುರೇಂದ್ರನ್, ಕುಮ್ಮನಂ ರಾಜಶೇಖರನ್, ವಿ.ವಿ.ರಾಜೇಶ್, ಪೊನ್ ರಾಧಾಕೃಷ್ಣನ್, ಜೆ.ಆರ್.ಪದ್ಮಕುಮಾರ್, ಅಡ್ವ. ಎಸ್.ಸುರೇಶ್ ಮೊದಲಾದವರು ಸ್ವಾಗತಿಸಿದರು. ನರೇಂದ್ರ ಮೋದಿ ಸರ್ಕಾರದ ಒಂಬತ್ತನೇ ವμರ್Áಚರಣೆಯ ಅಂಗವಾಗಿ ಬಿಜೆಪಿ ತಿರುವನಂತಪುರಂ ಸಂಸದೀಯ ಕ್ಷೇತ್ರದಿಂದ ನಡೆಯುತ್ತಿರುವ ವಿಶಾಲ ಜನಸಭಾದಲ್ಲಿ ಭಾಗವಹಿಸಲು ಜಗತ್ ಪ್ರಕಾಶ್ ನಡ್ಡಾ ಆಗಮಿಸಿದ್ದಾರೆ. ಬೂತ್ ಪ್ರಭಾರಿ ಅಧ್ಯಕ್ಷರು ಮತ್ತು ಮೇಲ್ಪಟ್ಟ ಕಾರ್ಯಕರ್ತರು ವಿಶಾಲ ಜನಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಜೆ.ಪಿ.ನಡ್ಡಾ ಅವರು ಕನ್ನಮ್ಮುಳ ಚಟ್ಟಂಬಿಸ್ವಾಮಿ ಸ್ಮಾರಕ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದರು. ನಂತರ ಚಟ್ಟಂಬಿಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಬಳಿಕ ಪದ್ಮನಾಭನ ಭಾವಚಿತ್ರಕ್ಕೆ ಸಮುದಾಯದ ಅರ್ಚಕ ಭರತ್ ಕೇಸರಿ ಮನ್ನತ್ ಪುμÁ್ಪರ್ಚನೆ ಮಾಡಿದರು. ಬಳಿಕ ಕವಡಿಯಾರ್ ಉದಯ್ ಪ್ಯಾಲೇಸ್‍ನಲ್ಲಿ ನಡೆದ ತಿರುವನಂತಪುರಂ ಕ್ಷೇತ್ರ ವಿಶಾಲ ಜನಸಭಾವನ್ನು ಉದ್ಘಾಟಿಸಿದರು.